ADVERTISEMENT

ಬೆಂಗಳೂರು | ಶಂಕಿತ ಉಗ್ರರಿಗೆ ಪರಪ್ಪನ ಅಗ್ರಹಾರ ಜೈಲೇ 'ತರಬೇತಿ ಕ್ಯಾಂಪಸ್'!

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 6:42 IST
Last Updated 19 ಜುಲೈ 2023, 6:42 IST
 ಉಗ್ರರಿಂದ ವಶಪಡಿಸಿಕೊಳ್ಳಲಾದ ವಸ್ತುಗಳು
ಉಗ್ರರಿಂದ ವಶಪಡಿಸಿಕೊಳ್ಳಲಾದ ವಸ್ತುಗಳು   

ಬೆಂಗಳೂರು: ಶಂಕಿತ ಉಗ್ರರಿಂದ ಸಿಸಿಬಿ ಪೊಲೀಸರು 7 ನಾಡಬಂದೂಕು, 45 ಜೀವಂತ ಗುಂಡುಗಳು, ವಾಕಿಟಾಕಿ ಹಾಗೂ 12 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕಮಿಷನರ್ ಬಿ.ದಯಾನಂದ ತಿಳಿಸಿದರು.

ಹೆಬ್ಬಾಳ ಪೊಲೀಸ್ ಠಾಣೆಯ ಮನೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ‌. ಹದಿನೈದರಂದು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಎಲ್ಲರನ್ನು ಟೆಕ್ನಿಕಲ್ ಸೆಲ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಬಂಧನಕ್ಕೆ ಕೇಂದ್ರದ ತನಿಖಾ ತಂಡಗಳನ್ನು ಸಂಪರ್ಕಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಜೈಲೇ ತರಬೇತಿ ಕ್ಯಾಂಪಸ್

2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ನಸೀರ್ ಮದಾನಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದನು. 2017ರಲ್ಲಿ ನೂರ್ ಅಹಮದ್ ಕೊಲೆ ಪ್ರಕರಣದಲ್ಲಿ ಜುನೈದ್ ಸೇರಿದಂತೆ 21 ಮಂದಿ ಜೈಲು ಸೇರಿದ್ದರು. ಅಲ್ಲಿ ನಸೀರ್ ಸಂಪರ್ಕದಿಂದ ಎಲ್ಲರೂ ಸಂಚು ರೂಪಿಸಿದ್ದರು. ಜುನೈದ್ ಮೇಲೆ 2017ರಲ್ಲಿ ಕೊಲೆ ಪ್ರಕರಣ, 2020 ರಕ್ತಚಂದನ, 2021ನಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿದ್ದವು. 18 ತಿಂಗಳು ಶಿಕ್ಷೆ ಅನುಭವಿಸಿದ್ದ ಈತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಈತನೇ ಮಾಸ್ಟರ್ ಮೈಡ್ ಆಗಿದ್ದಾನೆ. ಶಂಕಿತರಿಗೆ ವಿದೇಶದಿಂದ ನೆರವು ಬರುತ್ತಿರುವುದು ತನಿಖೆಯಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.