ADVERTISEMENT

ಬಂಜಾರ ಧರ್ಮಗುರು ರಾಮರಾವ್‌ ಮಹಾರಾಜ ನಿಧನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 18:31 IST
Last Updated 31 ಅಕ್ಟೋಬರ್ 2020, 18:31 IST
ರಾಮರಾವ್‌ ಮಹಾರಾಜ
ರಾಮರಾವ್‌ ಮಹಾರಾಜ   

ಕಲಬುರ್ಗಿ: ಬಂಜಾರ ಸಮುದಾಯದ ಧರ್ಮ ಗುರು,ಮಹಾರಾಷ್ಟ್ರದ ಪೌರಾಘಡದಲ್ಲಿರುವಪೌರಾದೇವಿ ಪೀಠದ ಪೀಠಾಧಿಪತಿ ರಾಮರಾವ್‌ ಮಹಾರಾಜ‌ (90) ಶುಕ್ರವಾರ ರಾತ್ರಿ ನಿಧನರಾದರು.

ಕರ್ನಾಟಕವೂ ಸೇರಿದಂತೆ ದೇಶದ ಲ್ಲಿರುವ ಬಂಜಾರ ಸಮುದಾಯದ ಧರ್ಮಗುರುಗಳಲ್ಲಿ ಅವರು ಪ್ರಮುಖರಾಗಿದ್ದರು. 1948ರಲ್ಲಿ ಪರಶುರಾಮ ಮಹಾರಾಜರು ನಿಧನರಾದ ನಂತರ ರಾಮರಾವ್‌ ಮಹಾರಾಜರು ಪೀಠ ಅಲಂಕರಿಸಿದ್ದರು. ಆರಂಭದಲ್ಲಿ 12 ವರ್ಷ ಅಗ್ನಿ ಅನುಷ್ಠಾನ, ಬಳಿಕ 12 ವರ್ಷ ಮೌನಾನುಷ್ಠಾನ ಕೈಗೊಂಡಿದ್ದರು.

ಪೌರಾದೇವಿಯಲ್ಲಿ ಪಂಢರಪುರ ದೇವಸ್ಥಾನದ ಮಾದರಿಯಲ್ಲಿ ಹೊಸ ಜೋಡಿ ಮಂದಿರ ನಿರ್ಮಿಸಿದ್ದರು. ದೇಶದ ಉದ್ದಗಲಕ್ಕೂ ಸಂಚರಿಸಿ ದುಶ್ಚಟ ಮತ್ತು ಮೌಢ್ಯಾಚರಣೆ ವಿರುದ್ಧ ಸಮುದಾಯದಲ್ಲಿ ಅರಿವು ಮೂಡಿಸಿದ್ದರು. ಅವರ ಧರ್ಮ ಕಾರ್ಯ ಹಾಗೂ ಸಮಾಜ ಸೇವೆ ಪರಿಗಣಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.

ADVERTISEMENT

ಅಂತ್ಯಸಂಸ್ಕಾರ: ‘ಭಾನುವಾರ (ನ. 1) ಮಧ್ಯಾಹ್ನ 12.30ಕ್ಕೆಪೌರಾಘಡದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಅಂತಿಮ ದರ್ಶನ ಮತ್ತು ಅಂತ್ಯಸಂಸ್ಕಾರದ ಕ್ರಿಯೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರ ಮಾಡಲಾಗುವುದು. ಅಂತ್ಯಸಂಸ್ಕಾರಕ್ಕೆ ಹೆಚ್ಚಿನ ಭಕ್ತರುಬರಬಾರದು ಎಂದು ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿದೆ’ ಎಂದು ಕಲಬುರ್ಗಿ ಸಂಸದ ಡಾ. ಉಮೇಶ ಜಾಧವ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.