ADVERTISEMENT

ಬಸವಕಲ್ಯಾಣ: ಜನಾಂದೋಲನ ಮಹಾಮೈತ್ರಿ ಜಾಥಾ ಆರಂಭ

ರಾಜ್ಯದ 4 ಕಡೆಗಳಿಂದ ಬೆಂಗಳೂರಿಗೆ ಜಾಥಾ; ಮಾ.15, 16ಕ್ಕೆ ರೈತ ಸಮಾವೇಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 23:15 IST
Last Updated 1 ಮಾರ್ಚ್ 2022, 23:15 IST
ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ಜನಾಂದೋಲನ ಮಹಾಮೈತ್ರಿಯ ಜಾಥಾಕ್ಕೆ ಹೋರಾಟಗಾರ ಎಸ್.ಆರ್. ಹಿರೇಮಠ ಚಾಲನೆ ನೀಡಿದರು. ಬಡಗಲಪುರ ನಾಗೇಂದ್ರ, ಹೋರಾಟಗಾರ್ತಿ ಕೆ.ನೀಲಾ, ಚಾಮರಸ ಮಾಲಿಪಾಟೀಲ, ರವಿಕುಮಾರ ಪೂಣಚ್ಚ ಇದ್ದಾರೆ
ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ಜನಾಂದೋಲನ ಮಹಾಮೈತ್ರಿಯ ಜಾಥಾಕ್ಕೆ ಹೋರಾಟಗಾರ ಎಸ್.ಆರ್. ಹಿರೇಮಠ ಚಾಲನೆ ನೀಡಿದರು. ಬಡಗಲಪುರ ನಾಗೇಂದ್ರ, ಹೋರಾಟಗಾರ್ತಿ ಕೆ.ನೀಲಾ, ಚಾಮರಸ ಮಾಲಿಪಾಟೀಲ, ರವಿಕುಮಾರ ಪೂಣಚ್ಚ ಇದ್ದಾರೆ   

ಬಸವಕಲ್ಯಾಣ: ಇಲ್ಲಿನ ಅನುಭವ ಮಂಟಪದ ಆವರಣದಿಂದ ಜನಾಂದೋಲನ ಮಹಾಮೈತ್ರಿಯ ಜಾಥಾ ಮಂಗಳವಾರ ಆರಂಭವಾಗಿದ್ದು, ಬೆಂಗಳೂರಿಗೆ ಪ್ರಯಾಣ ಬೆಳೆಸಿತು.

ಹೋರಾಟಗಾರ ಎಸ್.ಆರ್.ಹಿರೇಮಠ ಅವರು ಜಾಥಾದ ವಾಹನಕ್ಕೆ ಹಸಿರು ಶಾಲು ತೋರಿಸಿ ಚಾಲನೆ ನೀಡಿ, ‘ಮೂರು ಕರಾಳ ಕೃಷಿ ಕಾನೂನುಗಳನ್ನು ರಾಜ್ಯ ಸರ್ಕಾರ ಶೀಘ್ರ ಹಿಂದಕ್ಕೆ ಪಡೆಯಬೇಕು. ಶಾಸನಾತ್ಮಕ‌ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ರಾಜ್ಯದ ನಾಲ್ಕು ಕಡೆಗಳಿಂದ ಜಾಥಾ ಆರಂಭಗೊಂಡಿದ್ದು, ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ. ಅಲ್ಲಿ ಇದೇ 15 ಮತ್ತು 16ರಂದು ನಡೆಯುವ ರೈತ ಸಮಾವೇಶದಲ್ಲಿ ರೈತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.