ADVERTISEMENT

ವಿಧಾನ ಪರಿಷತ್ತಿನಲ್ಲಿ ಸದಸ್ಯರ ನಡೆ ಸರಿಯಿಲ್ಲ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 20:00 IST
Last Updated 7 ಫೆಬ್ರುವರಿ 2026, 20:00 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಹುಬ್ಬಳ್ಳಿ: ‘ವಿಧಾನ ಪರಿಷತ್ತಿನಲ್ಲಿ ಸದಸ್ಯರ ನಡವಳಿಕೆ ಸರಿ ಇಲ್ಲ. ಹೀಗಾಗಿ, ಮುಂಬರುವ ಅಧಿವೇಶನಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಎರಡು ಪುಟಗಳ ಪತ್ರ ಬರೆದು, ಸದಸ್ಯರಿಗೆ ತಿಳಿಸಿರುವೆ’ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

‘ವಿಧಾನ ಪರಿಷತ್ತು ಮಾರ್ಗದರ್ಶಕವಾಗಿದೆ. ಆದರೆ, ಸದಸ್ಯರಲ್ಲಿ ಗಾಂಭೀರ್ಯ ಇಲ್ಲ. ಜನಪರ ವಿಚಾರಗಳ ಬದಲು ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಾರೆ. ಮುಂದೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿರುವೆ. ಪ್ರಶ್ನೆ ಕೇಳುವ ವಿಧಾನ ಬಗ್ಗೆಯೂ ತರಬೇತಿ ನೀಡುವೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.