ADVERTISEMENT

ಆರ್‌ಎಸ್‌ಎಸ್‌ ಕಚೇರಿಗೆ ಬಸವರಾಜ ಹೊರಟ್ಟಿ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 20:34 IST
Last Updated 13 ಜುಲೈ 2021, 20:34 IST
ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಹುಬ್ಬಳ್ಳಿಯ ಆರ್ ಎಸ್ ಎಸ್ ಕೇಂದ್ರ ಕಚೇರಿ ಕೇಶವ ಕುಂಜಗೆ ಸೋಮವಾರ ಭೇಟಿ ನೀಡಿ ಸಂಘದ ಪ್ರಮುಖ ಶ್ರೀಧರ ನಾಡಿಗೇರ್‌ ಅವರೊಂದಿಗೆ ಮಾತುಕತೆ ನಡೆಸಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ‌ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ ಇದ್ದಾರೆ

ಹುಬ್ಬಳ್ಳಿ: ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರೊಂದಿಗೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಆರ್‌ಎಸ್‌ಎಸ್‌ ಕಚೇರಿಗೆ ಸೋಮವಾರ ಭೇಟಿ ನೀಡಿದ್ದರು.

ಕರ್ನಾಟಕ ಡಿಜಿಟಲ್‌ ಎಕನಾಮಿ ಮಿಷನ್‌ (ಕೆಡಿಇಎಂ) ಕೇಂದ್ರ ಉದ್ಘಾಟನೆಗೆ ಅಶ್ವತ್ಥನಾರಾಯಣ ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಕೇಂದ್ರ ಉದ್ಘಾಟನೆಗೆ ಮುಂಚೆ ಅವರು ಆರ್‌ಎಸ್‌ಎಸ್‌ ಕಚೇರಿ ಕೇಶವ ಕುಂಜಕ್ಕೆ ತೆರಳಿದ್ದರು. ಅವರ ಜೊತೆ ಹೊರಟ್ಟಿ ಅವರಿದ್ದರು. ಕೆಲಹೊತ್ತು ಆರ್‌ಎಸ್‌ಎಸ್‌ ಪ್ರಮುಖ ಶ್ರೀಧರ್‌ ನಾಡಿಗೇರ್‌, ಬಿಜೆಪಿ ಮುಖಂಡರ ಜೊತೆ ಚರ್ಚಿಸಿ ಹೊರಟುಹೋದರು.

‘ಕರ್ನಾಟಕ ವಿಶ್ವವಿದ್ಯಾಲಯ ಕಾರ್ಯಕ್ರಮ ಮುಗಿಸಿಕೊಂಡು ಡಿಸಿಎಂ ಅಶ್ವತ್ಥನಾರಾಯಣ ಅವರೊಂದಿಗೆ ಊಟಕ್ಕೆ ಹೊರಟಿದ್ದೆ. ಆಗ ಅವರು, 10 ನಿಮಿಷ ಆರ್‌ಎಸ್‌ಎಸ್‌ ಕಚೇರಿಗೆ ಹೋಗಿಬರುತ್ತೇನೆ. ನೀವೂ ಬನ್ನಿ. ಹಾಗೆಯೇ ಊಟಕ್ಕೆ ಹೋಗೋಣ ಎಂದು ಕರೆದರು. ಹಾಗಾಗಿ ಹೋಗಿದ್ದೆ. ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.