ADVERTISEMENT

ಮತಾಂತರಕ್ಕೆ ಮುಂದಾದರೆ ಉಗ್ರ ಕ್ರಮ: ಬಿ.ಸಿ.ಪಾಟೀಲ್

ಹಿರಿಯೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 9:50 IST
Last Updated 11 ಸೆಪ್ಟೆಂಬರ್ 2021, 9:50 IST
ಬಿ.ಸಿ.ಪಾಟೀಲ್‌
ಬಿ.ಸಿ.ಪಾಟೀಲ್‌   

ಚಿತ್ರದುರ್ಗ: ‘ರಾಜ್ಯದಲ್ಲಿ ಯಾರೇ ಮತಾಂತರ ಮಾಡುವುದಕ್ಕೆ ಮುಂದಾದರು ಅಂಥವರ ಮೇಲೆ ರಾಜ್ಯ ಸರ್ಕಾರ ಉಗ್ರ ಕ್ರಮ ಕೈಗೊಳ್ಳಲಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಹಿರಿಯೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಭ್ರಷ್ಟನಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿಲ್ವರ್‌ ಬ್ರಿಡ್ಜ್‌ ನಿರ್ಮಾಣದಲ್ಲಿ ₹ 500 ಕೋಟಿ ಪಡೆದಿದ್ದಾರೆ ಎಂಬ ಆರೋಪ ಇತ್ತು. ಆರೋಪ ಮಾಡಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗುವುದಿಲ್ಲ. ನಾನು ಲಂಚ ಪಡೆದಿದ್ದೇನೆ ಎಂಬುದಾಗಿ ಆರೋಪಿಸುವವರು ಸಾಬೀತು ಪಡಿಸಬೇಕು. ಇಲ್ಲದಿದ್ದರೆ, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ತಿರುಗೇಟು ನೀಡಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಜನಪರವಾಗಿದ್ದರೆ ಜನ ತಿರಸ್ಕರಿಸುತ್ತಿರಲಿಲ್ಲ. ಜನವಿರೋಧಿ ಆಗಿರುವುದಕ್ಕೆ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. 2023ರಲ್ಲೂ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ಕೃಷಿ ಇಲಾಖೆ ಪಾರದರ್ಶಕವಾಗಿದೆ. ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯುತ್ತದೆ. ಸರ್ಕಾರವೇ ರೈತರ ಹೊಲ–ಮನೆ ಬಾಗಿಲಿಗೆ ಹೋಗುವ ಕೆಲಸ ಮಾಡುತ್ತಿದೆ’ ಎಂದರು.

ADVERTISEMENT

‘ನಿಫಾ ವೈರಸ್ ರಾಜ್ಯ ಪ್ರವೇಶಿಸದಂತೆ ಎಲ್ಲಾ ಗಡಿಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಉಳಿದ ರಾಜ್ಯಗಳಿಗಿಂತ ಕರ್ನಾಟಕ ಸುರಕ್ಷಿತವಾಗಿದೆ’ ಎಂದ ಅವರು,‘ಕೇಂದ್ರದ ನೂತನ ಕೃಷಿ ಕಾಯ್ದೆ ರೈತ ವಿರೋಧಿಯಲ್ಲ. ಉತ್ಪನ್ನಗಳ ಮಾರಾಟಕ್ಕೆ ರೈತರಿಗೆ ಸ್ವಾತಂತ್ರ ಕೊಟ್ಟಿದೆ. ಪಂಜಾಬ್‌ ಸೇರಿ ವಿವಿಧ ರಾಜ್ಯಗಳು ಎಂಎಸ್‌ಪಿ ಬೆಂಬಲ ಬೆಲೆಯಿಂದ ಲಾಭ ಪಡೆದಿವೆ. ಪ್ರತಿಭಟನೆ ಎಂಬುದು ವಿರೋಧ ಪಕ್ಷದವರ ದುರುದ್ದೇಶ’ ಎಂದು ಕಿಡಿಕಾರಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.