ADVERTISEMENT

₹35 ಸಾವಿರ ಕೋಟಿಗೆ ಲೆಕ್ಕ ಕೊಟ್ಟ ಸಚಿವ ಕೃಷ್ಣ ಬೈರೇಗೌಡ

ಬಿಜೆಪಿ ಆರೋಪಕ್ಕೆ ಸರ್ಕಾರ ತಿರುಗೇಟು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 20:10 IST
Last Updated 19 ಡಿಸೆಂಬರ್ 2018, 20:10 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಳಗಾವಿ: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಖರ್ಚು ಮಾಡಲಾದ ₹35,000 ಕೋಟಿಗೆ ಲೆಕ್ಕವೇ ಇಲ್ಲ ಎಂದು ಬಿಜೆಪಿ ಮಾಡಿದ ಆರೋಪಕ್ಕೆ, ಕಾನೂನು ಸಚಿವ ಕೃಷ್ಣ ಬೈರೇಗೌಡ ಪ್ರತ್ಯುತ್ತರ ನೀಡಿದರು.

‘2016–17ನೇ ಸಾಲಿನ ವೆಚ್ಚದ ಕುರಿತು ಸಿಎಜಿ ನೀಡಿರುವ ವರದಿ ಇಟ್ಟುಕೊಂಡು ಬಿಜೆಪಿಯವರು ಆರೋ ಪ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಆಡಳಿತ ಅವಧಿಯಲ್ಲಿ ಲೆಕ್ಕಕ್ಕೇ ಸಿಗದ ಮೊತ್ತದ ಪ್ರಮಾಣ ದೊಡ್ಡ ಮೊತ್ತದಲ್ಲಿತ್ತು. ಆಗ ಅದು ಗೊತ್ತಾಗಲಿಲ್ಲವೇ’ ಎಂದೂ ಅವರು ಪ್ರಶ್ನಿಸಿದರು.

ಸಿಎಜಿ ವರದಿಯನ್ನು ಉಲ್ಲೇ ಖಿಸಿವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎನ್‌. ರವಿಕುಮಾರ್ ಮಾಡಿದ ಆರೋಪಗಳಿಗೆ ಉತ್ತರಿಸಿದ ಅವರು, ‘ಸಿಎಜಿ ವರದಿಯಲ್ಲಿ ಬಜೆಟ್‌ನ ಶೇ 19ರಷ್ಟು ಹಣದ ಖರ್ಚು ತಾಳೆಯಾಗುತ್ತಿಲ್ಲ ಎಂದು ತಿಳಿಸಲಾಗಿದೆ. ಬಿಜೆಪಿ ಆಡಳಿತ ನಡೆಸಿದ 2010–11ರಲ್ಲಿ ಶೇ 32.92, 2011–12ರಲ್ಲಿ 33 ರಷ್ಟಿತ್ತು’ ಎಂದು ತಿರುಗೇಟು ನೀಡಿದರು.

ADVERTISEMENT

‘ಶಾಸಕಾಂಗದ ಅನುಮೋದನೆ ಇಲ್ಲದೇ ₹ 6,057 ಕೋಟಿ ಬಿಡುಗಡೆ ಮಾಡಿದೆ ಎಂದು ಸಿಎಜಿ ಹೇಳಿದೆ ಎಂದು ಬಿಜೆಪಿಯವರು ಹೇಳಿದ್ದಾರೆ.

ಈ ಹಣಕ್ಕೆ ಪೂರಕ ಅಂದಾಜು ಮೂಲಕ ಅನುಮೋದನೆ ಪಡೆಯಲಾಗಿದೆ ಎಂದು ಅದೇ ವರದಿಯಲ್ಲಿದೆ. ಅದು ಅವರಿಗೆ ಕಾಣಲಿಲ್ಲವೇ? ನಿಮ್ಮ ಪ್ರಕಾರ ಕೊಡಗಿನಲ್ಲಿ ಪ್ರವಾಹ ಸ್ಥಿತಿಯಾದಾಗ ಹಣ ಬಿಡುಗಡೆಗೆ ಶಾಸಕಾಂಗದ ಅನುಮೋದನೆ ಬೇಕು ಎಂದು ಸುಮ್ಮನೆ ಕುಳಿತುಕೊಳ್ಳಬೇಕಿತ್ತೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.