ADVERTISEMENT

ಮಾನಹಾನಿ ಹೇಳಿಕೆ | ನಿಮಗೆ ಅಮ್ಮ, ಮಗಳು ಇಲ್ಲವೇ: CT ರವಿ ಪ್ರಶ್ನಿಸಿದ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 16:15 IST
Last Updated 19 ಡಿಸೆಂಬರ್ 2024, 16:15 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ (ಸುವರ್ಣ ಸೌಧ): ಮಾನಹಾನಿ ಹೇಳಿಕೆ ಬಗ್ಗೆ ಸದನದಲ್ಲಿ ಗದ್ದಲವಾಗುತ್ತಿದ್ದಂತೆಯೇ ಸಭಾಪತಿ ಕಲಾಪ ಮುಂದೂಡಿದರು. ಈ ವೇಳೆ ರವಿ ಅವರನ್ನು ಸಭಾಪತಿ ಕೊಠಡಿಗೆ ಕರೆದೊಯ್ಯಲು ಮುಂದಾದ ಮಾರ್ಷಲ್‌ಗಳು ಅವರ ಸುತ್ತ ಕೋಟೆ ಕಟ್ಟಿದರು.

ಈ ವೇಳೆ, ನಿನಗೆ ಅಮ್ಮ ಇಲ್ಲವೇ, ಹೆಂಡತಿ ಇಲ್ಲವೇ, ಮಗಳು ಇಲ್ಲವೇ ಎಂದು ಲಕ್ಷ್ಮೀ ಹೆಬ್ಬಾಳಕರ ಏರಿದ ಧ್ವನಿಯಲ್ಲಿ ರವಿ ಅವರನ್ನು ಪ್ರಶ್ನಿಸಿದರು. ಇದಕ್ಕೆ, ಕಾಂಗ್ರೆಸ್‌ನ ಇತರ ಸದಸ್ಯರು ಧ್ವನಿಗೂಡಿಸಿ ರವಿ ವಿರುದ್ಧ ಹರಿಹಾಯ್ದರು. ಅತ್ತ ಬಿಜೆಪಿ ಸದಸ್ಯರು, ರವಿ ಬೆಂಬಲಕ್ಕೆ ನಿಂತರು. ಆಕ್ರೋಶ–ಕೂಗಾಟಗಳ ಮಧ್ಯೆಯೇ ಕಲಾಪ ಕೊನೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT