ADVERTISEMENT

ಕಾವೇರಿಯನ್ನು ಕದ್ದು ಮುಚ್ಚಿ ತಮಿಳುನಾಡಿಗೆ ಬಿಟ್ಟಿದ್ದರಿಂದ ನೀರಿನ ಸಮಸ್ಯೆ: BJP

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2024, 9:33 IST
Last Updated 26 ಫೆಬ್ರುವರಿ 2024, 9:33 IST
ಕುಡಿಯುವ ನೀರಿನ ಸಮಸ್ಯೆ
ಕುಡಿಯುವ ನೀರಿನ ಸಮಸ್ಯೆ   

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ತಲೆದೂರಿರುವ ನೀರಿನ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಾವೇರಿಯನ್ನು ಕದ್ದು ಮುಚ್ಚಿ ತಮಿಳುನಾಡಿಗೆ ಬಿಡದಿದ್ದರೆ, ಇಂದು ಈ ದುಸ್ಥಿತಿ ಕರುನಾಡಿಗೆ, ಅದರಲ್ಲೂ ಬೆಂಗಳೂರಿಗೆ ಬರುತ್ತಿರಲಿಲ್ಲ ಎಂದು ಬಿಜೆಪಿ ಹೇಳಿದೆ.

ಈ ಬಗ್ಗೆ ‘ಎಕ್ಸ್‌’ನಲ್ಲಿ ಬಿಜೆಪಿ ಬರೆದುಕೊಂಡಿದೆ.

ADVERTISEMENT

‘ಅಧಿಕಾರದ ದುರಾಸೆಯಿಂದ ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಗದ್ದುಗೆ ಹಿಡಿದ ಕಾಂಗ್ರೆಸ್‌ನಿಂದ ಗಿಫ್ಟ್’ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘ಸ್ಟಾಲಿನ್ ನಾಡಿಗೆ ಕಾವೇರಿ ಗಿಫ್ಟ್, ಕನ್ನಡಿಗರಿಗೆ ಕಲುಷಿತ ನೀರಿನ ಗಿಫ್ಟ್, ರಾಜಧಾನಿಗೆ ಟ್ಯಾಂಕರ್‌ ಮಾಫಿಯಾ ಗಿಫ್ಟ್, ಕಾವೇರಿ ನಂಬಿದ್ದ ಜನರಿಗೆ ಖಾಲಿ ಚೊಂಬಿನ ಗಿಫ್ಟ್, ಬರ ನಿರ್ವಹಣೆ ಮಾಡದೆ ನೀರಿನ ಹಾಹಾಕಾರದ ಗಿಫ್ಟ್, ಉತ್ತರ ಕರ್ನಾಟಕದಲ್ಲಿ ಬರ ಪರಿಸ್ಥಿತಿಯಿಂದ ಜನ ಗುಳೆ ಹೋಗುತ್ತಿದ್ದಾರೆ. ಮಜಾವಾದಿ ಸಿದ್ದರಾಮಯ್ಯ ಸರ್ಕಾರ, ಕನ್ನಡಿಗರ ತೆರಿಗೆ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಾ ಕುಡಿಯುವ ಹನಿ ನೀರಿಗೂ ಕಂಟಕ ತಂದಿಟ್ಟಿದೆ’ ಎಂದು ಬಿಜೆಪಿ ಕಿಡಿ ಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.