ADVERTISEMENT

ಸಾರ್ವಜನಿಕರ ಅನುಕೂಲಕ್ಕೆ ಪೊಲೀಸರಿಂದ ‘ಸೇಫ್ ಕನೆಕ್ಟ್‌’ ಆ್ಯಪ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 18:47 IST
Last Updated 11 ಜುಲೈ 2025, 18:47 IST
<div class="paragraphs"><p>ಪೊಲೀಸ್ – ಪ್ರಾತಿನಿಧಿಕ ಚಿತ್ರ</p></div>

ಪೊಲೀಸ್ – ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಪೊಲೀಸರು, ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್‌ಪಿ)  ಸೇಫ್ ಕನೆಕ್ಟ್‌ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಇದರ ಮೂಲಕ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಆಡಿಯೊ ಮತ್ತು ವಿಡಿಯೊ ಕರೆಗಳನ್ನು ಮಾಡಬಹುದಾಗಿದೆ.

ಸೇಫ್ ಕನೆಕ್ಟ್ ಒಂದು ದ್ವಿಮುಖ ಆಡಿಯೊ, ವಿಡಿಯೊ ಕರೆಗಳನ್ನು ಒದಗಿಸುವ ಆ್ಯಪ್ ಆಗಿದೆ. ಈ ಅತ್ಯಾಧುನಿಕ ವ್ಯವಸ್ಥೆ ಯಾವುದೇ ಘಟನೆಯ ನೈಜ-ಸಮಯದ ವಿಡಿಯೊ ಕರೆಗಳು ಮತ್ತು ಲೈವ್ ಲೊಕೇಶನ್ ಟ್ರ್ಯಾಕಿಂಗ್ ಮಾಹಿತಿಯನ್ನು ಸಿಟಿ ಕಮಾಂಡ್ ಸೆಂಟರ್‌ಗೆ ವರದಿ ಮಾಡಲು ನೆರವಾಗುತ್ತದೆ.

ADVERTISEMENT

ಸಹಾಯವು ಯಾವಾಗಲೂ ಒಂದು ಕ್ಲಿಕ್ ದೂರದಲ್ಲಿದೆ ಎಂದು ಖಚಿತಪಡಿಸುತ್ತದೆ. ತಕ್ಷಣದ ಮತ್ತು ಪರಿಣಾಮಕಾರಿ ಸಂವಹನವನ್ನು ನಾಗರಿಕರ ಕೈಯಲ್ಲಿ ಇರಿಸಿ, ಸುರಕ್ಷಿತ ವಾತಾವರಣ ನಿರ್ಮಾಣದತ್ತ ಮಹತ್ವದ ಹೆಜ್ಜೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಈ ಆ್ಯಪ್‌ನ ಮುಖ್ಯ ಉದ್ದೇಶ ಮಹಿಳೆಯರು ಹಾಗೂ ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ತಕ್ಷಣ ಸಹಾಯ ಪಡೆಯಲು ಮತ್ತು ಪೊಲೀಸ್ ಠಾಣೆಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಸಹಾಯ ಮಾಡುವುದಾಗಿದೆ.

ಸೇಫ್‌ ಕನೆಕ್ಟ್‌ನಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ಒಂದು ಕ್ಲಿಕ್‌ನೊಂದಿಗೆ ಪೊಲೀಸ್ ಸಹಾಯ ಪಡೆಯಬಹುದು. ಯಾವುದೇ ಘಟನೆ ಅಥವಾ ಪ್ರಕರಣವನ್ನು ಆನ್‌ಲೈನ್‌ನಲ್ಲಿ ಪೊಲೀಸರಿಗೆ ವರದಿ ಮಾಡಬಹುದು. ಇದು ಗೂಗಲ್ ಪ್ಲೇಸ್ಟೋರ್ ಹಾಗೂ ಆಪಲ್ ಸ್ಟೋರ್‌ನಲ್ಲಿ ಲಭ್ಯವಿದೆ. ನಾಗರಿಕರು ಸುಲಭವಾಗಿ ತಮ್ಮ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.