ADVERTISEMENT

ಅನೈತಿಕ ಸಂಬಂಧ ಆರೋಪ: ಎಸ್‌ಪಿ ಭೀಮಾಶಂಕರ ಗುಳೇದ ಎತ್ತಂಗಡಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 19:30 IST
Last Updated 16 ಜುಲೈ 2018, 19:30 IST

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಭೀಮಾಶಂಕರ ಗುಳೇದ ಅವರನ್ನು ಎತ್ತಂಗಡಿ ಮಾಡಲಾಗಿದ್ದು, ಆ ಜಾಗಕ್ಕೆ ಬೆಂಗಳೂರು ಸಂಚಾರ ಡಿಸಿಪಿ (ಪಶ್ಚಿಮ) ಟಿ.‍‍ಪಿ.ಶಿವಕುಮಾರ್‌ ಅವರನ್ನು ವರ್ಗ ಮಾಡಲಾಗಿದೆ.

ಲೋಕಾಯುಕ್ತ ಎಸ್‌ಪಿ ಡಾ.ಸುಮನ್‌ ಡಿ.ಪೆನ್ನೇಕರ್‌ ಅವರನ್ನು ಕೊಡಗು ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.

‘ನನ್ನ ಪತ್ನಿ ಜೊತೆ ಭೀಮಾಶಂಕರ ಅನೈತಿಕ ಸಂಬಂಧ ಹೊಂದಿದ್ದಾರೆ’ ಎಂದು ಆರೋಪಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರು ಕೋರಮಂಗಲ ಠಾಣೆಗೆ ದೂರು ನೀಡಿದ್ದರು. ಗುಳೇದ ಅವರಿಗೆ ಸ್ಥಾನ ತೋರಿಸಿಲ್ಲ.

ADVERTISEMENT

‘ಭೀಮಾಶಂಕರ ವಿರುದ್ಧ ಕೇಳಿ ಬಂದಿರುವ ಆಪಾದನೆ ಕುರಿತು ತನಿಖೆ ನಡೆಸುವಂತೆ ಡಿಜಿಪಿ ನೀಲಮಣಿರಾಜು ಅವರಿಗೆ ಸೂಚಿಸುತ್ತೇನೆ. ಐಪಿಎಸ್‌ ಅಧಿಕಾರಿಗಳ ವಿರುದ್ಧ ಕೇಂದ್ರ ಸರ್ಕಾರವೇ ಕ್ರಮಕೈಗೊಳ್ಳುತ್ತದೆ. ತನಿಖಾ ವರದಿಯನ್ನು ಆಧರಿಸಿ ಗುಳೇದ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಗೃಹಸಚಿವ ಜಿ.ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.