ADVERTISEMENT

ವೀಳ್ಯದೆಲೆ ದುಬಾರಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 19:24 IST
Last Updated 3 ಫೆಬ್ರುವರಿ 2023, 19:24 IST
ತೋವಿನಕೆರೆ ಸಂತೆಗೆ ಶುಕ್ರವಾರ ಮಾರಾಟಕ್ಕೆ ತಂದಿದ್ದ ವೀಳ್ಯದೆಲೆ
ತೋವಿನಕೆರೆ ಸಂತೆಗೆ ಶುಕ್ರವಾರ ಮಾರಾಟಕ್ಕೆ ತಂದಿದ್ದ ವೀಳ್ಯದೆಲೆ   

ತೋವಿನಕೆರೆ (ತುಮಕೂರು): ಇಲ್ಲಿನ ಸಂತೆಯಲ್ಲಿ ಶುಕ್ರವಾರ ವೀಳ್ಯದೆಲೆ ಒಂದು ಕಟ್ಟಿಗೆ (100 ಎಲೆಗಳು) ₹ 160ರಂತೆ ದಾಖಲೆ ಬೆಲೆಗೆ ಮಾರಾಟವಾಯಿತು.

ಕೆಲವು ದಿನಗಳಿಂದ ವೀಳ್ಯದೆಲೆ ಬೆಲೆ ಹೆಚ್ಚಾಗುತ್ತಿದೆ. ಇತ್ತೀಚಿಗೆ ಒಂದು ಕಟ್ಟು ₹ 150ರವರೆಗೂ ಏರಿಕೆ ಕಂಡಿತ್ತು. ಈಗ ಮತ್ತಷ್ಟು ಹೆಚ್ಚಳವಾಗಿದೆ.

ರೈತರೇ ಸಂತೆಗೆ ಎಲೆ ತಂದು ಮಾರಾಟ ಮಾಡುತ್ತಾರೆ. ರೈತರಿಂದ ಖರೀದಿಸಿದ ವ್ಯಾಪಾರಿಗಳು ಚಿಲ್ಲರೆಯಾಗಿ ಒಂದು ಕಟ್ಟಿಗೆ ₹ 200ರಿಂದ ₹ 250ರ ವರೆಗೆ ಮಾರಾಟ ಮಾಡುತ್ತಿದ್ದಾರೆ.

ADVERTISEMENT

ತೋವಿನಕೆರೆ ಸುತ್ತಮುತ್ತ ಹೆಚ್ಚಾಗಿ ವೀಳ್ಯದೆಲೆ ಬೆಳೆಯಲಾಗುತ್ತಿದೆ. ಸಂತೆಯಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತದೆ. ಜಿಲ್ಲೆಯಷ್ಟೇ ಅಲ್ಲದೆ ಆಂಧ್ರಪ್ರದೇಶದ ಹಿಂದೂಪುರ ಭಾಗದ ಜನರು ಬಂದು ಖರೀದಿಸುತ್ತಾರೆ. ಬೇಡಿಕೆಗೆ ತಕ್ಕಷ್ಟು ಆವಕ ಇಲ್ಲದಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.