ADVERTISEMENT

ಬಿದಾಯಿ ಯೋಜನೆ: ಫಲಾನುಭವಿಗಳಿಗೆ ₹142 ಕೋಟಿ ಬಾಕಿ ಪಾವತಿಸದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 20 ಮೇ 2019, 17:18 IST
Last Updated 20 ಮೇ 2019, 17:18 IST

ಬೆಂಗಳೂರು: ‘ಬಿದಾಯಿ’ ಯೋಜನೆ ಫಲಾನುಭವಿಗಳಿಗೆ ಸಕಾಲದಲ್ಲಿ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಈವರೆಗೆ ಒಟ್ಟು ₹142.70 ಕೋಟಿ ಬಾಕಿ ಉಳಿಸಿಕೊಂಡಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾಹಿತಿ ಹಕ್ಕಿನಡಿ ಈ ವಿವರ ಪಡೆದುಕೊಂಡಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಅಲ್ಪ ಸಂಖ್ಯಾತ ಸಮುದಾಯದ (ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್, ಪಾರ್ಸಿ) ಮಹಿಳೆಯರ ವಿವಾಹ ಸಂದರ್ಭದಲ್ಲಿ ಬಿದಾಯಿ ಯೋಜನೆಯಡಿ ₹50 ಸಾವಿರ ಧನ ಸಹಾಯ ನೀಡಲಾಗುತ್ತಿದೆ.

ADVERTISEMENT

ಬಿಪಿಎಲ್ ಕುಟುಂಬದ ಯುವತಿ, ವಿಧವೆಯರು, ವಿಚ್ಛೇದಿತ ಮಹಿಳೆಯರು ಯೋಜನೆ ಫಲಾನುಭವಿಗಳು.

ಧಾರವಾಡ ಜಿಲ್ಲೆಯಲ್ಲಿ ಅತಿಹೆಚ್ಚು 2,440 ಅರ್ಜಿಗಳು ಬಾಕಿ ಉಳಿದಿವೆ. ಹಾವೇರಿ ಜಿಲ್ಲೆ 2,342,ಬೀದರ್ 2,230 ಅರ್ಜಿಗಳು
ಬಾಕಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.