ADVERTISEMENT

ಕೋವಿಡ್-19: ಬೀದರ್‌ನಲ್ಲಿ ಶುಕ್ರವಾರ ರಾತ್ರಿ ವೃದ್ಧ ಸಾವು

​ಪ್ರಜಾವಾಣಿ ವಾರ್ತೆ
Published 2 ಮೇ 2020, 10:13 IST
Last Updated 2 ಮೇ 2020, 10:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀದರ್: ಕೋವಿಡ್‌ 19 ಸೋಂಕಿನಿಂದಾಗಿ ಶುಕ್ರವಾರ ರಾತ್ರಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಸರ್ಕಾರಿ ದಾಖಲೆ ಪ್ರಕಾರ ಇದು ಕೋವಿಡ್‌ 19 ಸೋಂಕಿಗೆ ಮೊದಲ ಸಾವಾಗಿದೆ.

ಓಲ್ಡ್‌ಸಿಟಿಯನಿವಾಸಿಯಾಗಿದ್ದ ವೃದ್ಧ ಎರಡು ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಆಗಾಗ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಇವರ ಮನೆಯಲ್ಲಿ ಯೊರೊಬ್ಬರಿಗೂ ಸೋಂಕು ತಗುಲಿರಲಿಲ್ಲ. ಆದರೆ, ತೀವ್ರ ಉಸಿರಾಟ ತೊಂದರೆಯಿಂದ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮಾಹಿತಿ ದೊರೆತ ತಕ್ಷಣ ಆರೋಗ್ಯ ಇಲಾಖೆಯ ಸಿಬ್ಬಂದಿ ರೋಗಿಯ ಗಂಟಲು ದ್ರವ ಹಾಗೂ ರಕ್ತ ಮಾದರಿ ಪಡೆದು ಕಲಬುರ್ಗಿಯ ಪ್ರಯೋಗಾಯಲಕ್ಕೆ ಕಳಿಸಿದ್ದರು. ತಕ್ಷಣ ವೈಜ್ಞಾನಿಕ ವಿಧಾನದಲ್ಲಿ ಶವಸಂಸ್ಕಾರ ನೆರವೇರಿಸಿದ್ದಾರೆ. ಕುಟುಂಬದ ಸದಸ್ಯರೆಲ್ಲರನ್ನೂ ಕ್ವಾರಂಟೈನ್‌ಲ್ಲಿ ಇಡಲಾಗಿದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.