ADVERTISEMENT

ಜ.29ರಿಂದ ಚಲನಚಿತ್ರೋತ್ಸವ: 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 23:11 IST
Last Updated 23 ಡಿಸೆಂಬರ್ 2025, 23:11 IST
ಸಿದ್ದರಾಮಯ್ಯ 17ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಲೋಗೊವನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ವಾರ್ತಾ ಇಲಾಖೆ ಕಾರ್ಯದರ್ಶಿ ಬಿ.ಬಿ ಕಾವೇರಿ, ನಟಿ ಶರಣ್ಯ ಶೆಟ್ಟಿ, ನಿರ್ದೇಶಕ ತರುಣ್ ಸುಧೀರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಪಾಲ್ಗೊಂಡಿದ್ದರು
ಸಿದ್ದರಾಮಯ್ಯ 17ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಲೋಗೊವನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ವಾರ್ತಾ ಇಲಾಖೆ ಕಾರ್ಯದರ್ಶಿ ಬಿ.ಬಿ ಕಾವೇರಿ, ನಟಿ ಶರಣ್ಯ ಶೆಟ್ಟಿ, ನಿರ್ದೇಶಕ ತರುಣ್ ಸುಧೀರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಪಾಲ್ಗೊಂಡಿದ್ದರು   

ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಫೆಬ್ರುವರಿ 6ರವರೆಗೆ ನಡೆಯಲಿದ್ದು, 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ 400ಕ್ಕೂ ಹೆಚ್ಚು
ಪ್ರದರ್ಶನಗಳು ನಡೆಯಲಿವೆ. ಈ ಬಾರಿಯ ಚಿತ್ರೋತ್ಸವ ಮಹಿಳಾ ಸಬಲೀಕರಣದ ಆಶಯವನ್ನು ಹೊಂದಿದೆ.

ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಚಲನಚಿತ್ರೋತ್ಸವ ಕುರಿತು ನಡೆದ ಪೂರ್ವಭಾವಿ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಈ ಚಲನಚಿತ್ರೋತ್ಸವದ ರಾಯಭಾರಿಯಾಗಿ ಹಿರಿಯ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಚಿತ್ರೋತ್ಸವದ ಉದ್ಘಾಟನೆ ವಿಧಾನಸೌಧದ ಮುಂಭಾಗದ ಮೆಟ್ಟಿಲು
ಗಳ ಮೇಲೆ ನಡೆಯಲಿದೆ ಎಂದರು.

ADVERTISEMENT

ಚಿತ್ರೋತ್ಸವದ ಚಲನಚಿತ್ರಗಳ ಪ್ರದರ್ಶನ ರಾಜಾಜಿನಗರದ ಲುಲು ಮಾಲ್‌ನಲ್ಲಿರುವ ಸಿನಿ ಪೊಲೀಸ್‌
ನಲ್ಲಿರುವ 11 ಪರದೆಗಳಲ್ಲಿ ನಡೆಯಲಿದೆ. ಅಲ್ಲದೇ, ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ
ಡಾ.ರಾಜ್‌ಕುಮಾರ್‌ ಭವನ, ಬನಶಂಕರಿಯಲ್ಲಿರುವ ಸುಚಿತ್ರ ಫಿಲಂ ಸೊಸೈಟಿ
ಗಳಲ್ಲೂ ಪ್ರದರ್ಶನ ನಡೆಯಲಿದೆ ಎಂದರು.

ಚಿತ್ರೋತ್ಸವದಲ್ಲಿ ಏಷ್ಯಾ, ಭಾರತೀಯ ಮತ್ತು ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಮೂರು ಸ್ಪರ್ಧಾತ್ಮಕ ವಿಭಾಗಗಳಿಗೆ ಈವರೆಗೆ 110 ಕ್ಕೂ ಹೆಚ್ಚು ಚಲನಚಿತ್ರಗಳು ಸಲ್ಲಿಕೆಯಾಗಿವೆ. ಸ್ಮರ್ಧಾತ್ಮಕ ವಿಭಾಗಗಳ ಅರ್ಜಿ ಸಲ್ಲಿಕೆಗೆ ಡಿಸೆಂಬರ್‌ 11 ಕಡೆಯ ದಿನ ಎಂದು ಅವರು ತಿಳಿಸಿದರು.

ಚಿತ್ರೋತ್ಸವಕ್ಕೆ ₹7 ಕೋಟಿ ಅನುದಾನ ಒದಗಿಸಲಾಗಿದೆ. ಸಮಾರೋಪ ಸಮಾರಂಭ ಫೆಬ್ರುವರಿ 6 ರಂದು ನಡೆಯಲಿದೆ. ಎಲ್ಲಾ ಸ್ಪರ್ಧಾ ವಿಭಾಗಗಳ ವಿಜೇತರು ಮತ್ತು ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಜನವರಿ 16ರಿಂದ ನೋಂದಣಿ ಸಾಮಾನ್ಯ ಪ್ರತಿನಿಧಿಗಳಿಗೆ ₹800 ಶುಲ್ಕ ಚಿತ್ರೋದ್ಯಮ ಸದಸ್ಯರು, ವಿದ್ಯಾರ್ಥಿಗಳಿಗೆ ₹400 ಶುಲ್ಕ ನೋಂದಣಿಗೆ www.biffes.org ಸಂಪರ್ಕಿಸಬಹುದು

ವಿಶ್ವ ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನ ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಾದ ಕಾನ್ಸ್‌ (ಫ್ರಾನ್ಸ್‌) ಬರ್ಲಿನ್‌ (ಜರ್ಮನಿ) ವೆನಿಸ್‌ (ಇಟಲಿ) ಕಾರ್ಲೋವಿ ವೇರಿ (ಜೆಕ್‌ ರಿಪಬ್ಲಿಕ್‌) ಲೊಕಾರ್ನೊ(ಸ್ವಿಟ್ಜರ್ಲೆಂಡ್‌) ರಾಟರ್‌ಡ್ಯಾಮ್‌ (ನೆದರ್‌ಲ್ಯಾಂಡ್‌) ಬೂಸಾನ್ (ದಕ್ಷಿಣ ಕೊರಿಯಾ) ಟೊರಾಂಟೊಗಳಲ್ಲಿ (ಕೆನಡಾ) ಭಾಗವಹಿಸಿ ಪ್ರಶಸ್ತಿ ಪಡೆದ ಸಿನಿಮಾಗಳನ್ನು ಈ ಚಲನಚಿತ್ರೋತ್ಸವದಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಈ ಬಾರಿಯ ಆಸ್ಕರ್‌ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಆಗಿರುವ ವಿವಿಧ ದೇಶಗಳ ಅತ್ಯುತ್ತಮ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಕನ್ನಡ ಚಿತ್ರರಂಗದ ವಿಶೇಷಗಳು 2025ಕ್ಕೆ 50 ವರ್ಷ ಸಿನಿ ಪಯಣ ಪೂರೈಸಿರುವ ಖ್ಯಾತ ನಿರ್ದೇಶಕರಾದ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಗಿರೀಶ್ ಕಾಸರವಳ್ಳಿ ಮತ್ತು ನಟಿ ಜಯಮಾಲಾ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರ ಪ್ರಮುಖ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ವಜ್ರೇಶ್ವರಿ ಕಂಬೈನ್ಸ್‌ನ ಕೆಲವು ಚಲನಚಿತ್ರಗಳು ಸೇರಿ ಹಲವು ಕನ್ನಡ ಚಿತ್ರಗಳ ಫಿಲಂ ಪ್ರಿಂಟ್‌ಗಳನ್ನು ಎನ್‌ಎಫ್‌ಡಿಸಿ–ಎನ್‌ಎಫ್‌ಎಐ ಪುಣೆ ಸಂಸ್ಥೆಯು ಇತ್ತೀಚೆಗೆ ಡಿಜಿಟಲ್‌ ರೂಪಾಂತರ ಮಾಡಿ ಸಂರಕ್ಷಿಸಿದೆ. ಜನಮನ್ನಣೆ ಪಡೆದ ಚಿತ್ರಗಳನ್ನು ಸಂರಕ್ಷಿತ ಕ್ಲಾಸಿಕ್‌ ವಿಭಾಗದಲ್ಲಿ ಪ್ರದರ್ಶಿಸಲಾಗುವುದು.

‘ಸ್ತ್ರೀ ಎಂದರೆ ಅಷ್ಟೇ ಸಾಕೆ..’

ಈ ಬಾರಿ ಚಲನ ಚಿತ್ರೋತ್ಸವವನ್ನು ಮಹಿಳಾ ಸಬಲೀಕರಣದ ಆಶಯದಡಿ ಆಯೋಜಿಸಲಾಗುತ್ತಿದೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಪ್ರಸಿದ್ಧ ಗೀತೆ ‘ಸ್ತ್ರೀ ಎಂದರೆ ಅಷ್ಟೇ ಸಾಕೆ....’ ಎಂಬ ಸಾಲಿನೊಂದಿಗೆ ‘ಸ್ತ್ರೀ: ಸಂವೇದನೆ ಸಮಾನತೆಯ ದನಿ’ ಎಂಬ ಟ್ಯಾಗ್ ಲೈನ್ ಹೊಂದಿರುವ ಧ್ಯೇಯ ವಾಕ್ಯವನ್ನು ಚಿತ್ರೋತ್ಸವದಲ್ಲಿ ಬಳಸಲು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.