ADVERTISEMENT

ಬಿಜೆಪಿ ರಾಷ್ಟ್ರಪತಿ ಆಳ್ವಿಕೆ ಹೇರಲು ಹುನ್ನಾರ ಮಾಡಿಲ್ಲ: ಸಚಿವ ಪ್ರಹ್ಲಾದ್ ಜೋಶಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 5:52 IST
Last Updated 20 ಜುಲೈ 2019, 5:52 IST
   

ಹುಬ್ಬಳ್ಳಿ: ಬಿಜೆಪಿ ರಾಷ್ಟ್ರಪತಿ ಆಳ್ವಿಕೆ ಹೇರಲು ಹುನ್ನಾರ ಮಾಡುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತುಎಂದುಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ಹೇಳಿದರು.

ಇಲ್ಲಿನ ಸಾರ್ವಜನಿಕ ಆಹವಾಲು ಸ್ವೀಕರಿಸುವ ಸಭೆಯಲ್ಲಿ ಮಾತನಾಡಿದ ಅವರು,ಮೈತ್ರಿ ಸರ್ಕಾರ ಪ್ರತಿ ಹಂತದಲ್ಲೂ ಸಂವಿಧಾನ‌ ಉಲ್ಲಂಘಿಸುತ್ತಿದೆ ಆದರೆ ನಾವು ಸಂವಿಧಾನ ರಕ್ಷಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ವಿಶ್ವಾಸಮತಯಾಚನೆ ಮಾಡ್ತೀನಿ ಅಂತಾ ಕುಮಾರಸ್ವಾಮಿಯವರೇ ತೀರ್ಮಾನ ಮಾಡಿದ್ದರು. ಆದರೆ ಅವರು ಇಲ್ಲಿಯವರೆಗೂವಿಶ್ವಾಸಮತಯಾಚನೆ ಮಾಡಿಲ್ಲ, ಸಂವಿಧಾನ ಮತ್ತು ಸಂವಿಧಾನ ಸಂಸ್ಥೆಗಳಿಗೆ ಯಾವುದೇ ಬೆಲೆ ಕೊಡದ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ADVERTISEMENT

ವಿಶ್ವಾಸಮತಯಾಚನೆಗೆ ಐದು ದಿನ ತೆಗೆದುಕೊಳ್ಳುವ ಇತಿಹಾಸವನ್ನ ಅವರು ಸೃಷ್ಠಿಸಿದ್ದಾರೆ,ನೆಗೆಟಿವ್ ಇತಿಹಾಸ ಸೃಷ್ಠಿ ಮಾಡುವಲ್ಲಿ ಕುಮಾರಸ್ವಾಮಿ ಆ್ಯಂಡ್ ಕಂಪೆನಿ ಎಕ್ಸ್‌ಫರ್ಟ್‌ ಆಗಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಮೈತ್ರಿ ಶಾಸಕರಿಗೆ ದುಡ್ಡು ಕೊಟ್ಟಿದ್ದರೆ, ಆಗಲೇ ದೂರು ಕೊಡಬೇಕಿತ್ತು. ಆದರೆ, ಆ ರೀತಿ ಮಾಡದೆ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಗೂರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದ್ದು ಖಂಡನೀಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.