
ಕೆಸ್‌ಟಿಡಿಸಿ ಹಾಕಿದ್ದ ಪೋಸ್ಟ್
ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ‘ಎಕ್ಸ್’ ಖಾತೆಯಲ್ಲಿ ವಯನಾಡ್ ಪ್ರವಾಸದ ಬಗ್ಗೆ ಪೋಸ್ಟ್ ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಕಿಡಿ ಕಾರಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವಯನಾಡ್ ಸೇವಾ ಕೇಂದ್ರದಂತಾಗಿದೆ ಎಂದು ಟೀಕಿಸಿದೆ.
ಕೆಎಸ್‌ಟಿಡಿಸಿ ಖಾತೆಯಲ್ಲಿ ಮಾಡಿರುವ ಪೋಸ್ಟ್ ಅನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ ತನ್ನ ‘ಎಕ್ಸ್’ ಖಾತೆಯಲ್ಲಿ ಹೀಗೆ ಬರೆದುಕೊಂಡಿದೆ.
‘ನಮ್ಮ ಕೆಎಸ್‌ಟಿಡಿಸಿ ಇರುವುದು ಕರ್ನಾಟಕಕ್ಕೋ, ಕೇರಳಕ್ಕೋ ತಿಳಿಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಕೆ ಪಾಟೀಲ ಅವರಿಗೆ ನಮ್ಮ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಕಾಣಲಿಲ್ಲವೇ? ನಿಮ್ಮ ಪ್ರಿಯಾಂಕಾ ಗಾಂಧಿಯನ್ನು ಮೆಚ್ಚಿಸಲು ನಮ್ಮ ಕರುನಾಡನ್ನೇ ಕಡೆಗಣಿಸುತ್ತಿದ್ದೀರಾ?’ ಎಂದು ಪ್ರಶ್ನಿಸಿದೆ.
ವಯನಾಡಿನ ಜನರಿಗೆ ಮನೆ, ಆನೆ ದಾಳಿಯಿಂದ ಸತ್ತವರಿಗೆ ಪರಿಹಾರ, ಇಷ್ಟೆಲ್ಲಾ ಮಾಡಿದ ಮೇಲೆ ಈಗ ವಯನಾಡನ್ನೇ ಕರ್ನಾಟಕಕ್ಕೆ ಸೇರಿಸಲು ಹೇಳಿ ಎಂದು ಬಿಜೆಪಿ ಹೇಳಿದೆ.
ಮುಖ್ಯಮಂತ್ರಿಯೊಬ್ಬರು ವಯನಾಡ್ ಜಿಲ್ಲಾಧಿಕಾರಿ ಹಾಗೂ ನಿಧಿ ಸಂಗ್ರಹಕನಾಗಿ ವರ್ತಿಸುವುದನ್ನು ಕರ್ನಾಟಕ ಎಷ್ಟು ಸಹಿಸಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಆಶೋಕ ಪ್ರಶ್ನಿಸಿದ್ದಾರೆ.
ಕರ್ನಾಟಕ ಸ್ವಂತ ಪ್ರವಾಸೋದ್ಯಮ ನಿಗಮವನ್ನು ಪ್ರಿಯಾಂಕಾ ಗಾಂಧಿಯವರ ಕ್ಷೇತ್ರ ವಯನಾಡ್‌ನ ಪ್ರಚಾರಕ್ಕೆ ಬಳಸಿಕೊಂಡಿರಿ ಎಂದು ಕಿಡಿ ಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.