ADVERTISEMENT

ಲಸಿಕೆಯಲ್ಲಿ ಮಾಂಸದ ಅಂಶವಿದ್ದರೂ ತೆಗೆದುಕೊಳ್ಳಿ: ಅಬ್ದುಲ್‌ ಅಜೀಂ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 9:30 IST
Last Updated 5 ಜನವರಿ 2021, 9:30 IST
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ, ಬಿಜೆಪಿ ಮುಖಂಡ ಅಬ್ದುಲ್‌ ಅಜೀಂ
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ, ಬಿಜೆಪಿ ಮುಖಂಡ ಅಬ್ದುಲ್‌ ಅಜೀಂ   

ಮಡಿಕೇರಿ: ‘ಜನರ ಆರೋಗ್ಯದ ದೃಷ್ಟಿಯಿಂದ ಔಷಧಿಯಲ್ಲಿ ಪೋರ್ಕ್‌ನ ಅಂಶವಿದ್ದರೂ ತೆಗೆದುಕೊಳ್ಳಬಹುದು ಎಂದು ಈ ಹಿಂದೆ ಪ್ರವಾದಿಯೊಬ್ಬರು ಹೇಳಿದ್ದರು. ಅದರಂತೆ, ಕೊರೊನಾ ತೊಲಗಿಸಲು ಲಸಿಕೆಯಲ್ಲಿ ಯಾವುದೇ ಮಾಂಸದ ಅಂಶವಿದ್ದರೂ ಅಲ್ಪಸಂಖ್ಯಾತರು ಭಯಪಡದೆ ತೆಗೆದುಕೊಳ್ಳಬಹುದು’ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಂ ಇಲ್ಲಿ ಮನವಿ ಮಾಡಿದರು.

‘ಲಸಿಕೆ ವಿತರಣೆ ವಿಚಾರದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಜನರ ಆರೋಗ್ಯ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಲಸಿಕೆ ತುರ್ತು ಬಳಕೆ ಅಗತ್ಯವಿದೆ. ಮುಸ್ಲಿಮರು ಆತಂಕವಿಲ್ಲದೆ ಲಸಿಕೆ ತೆಗೆದುಕೊಳ್ಳಬಹುದು’ ಎಂದು ಮಂಗಳವಾರ ಹೇಳಿದರು.

‘ಒಂದು ವರ್ಷದ ಸಂಶೋಧನೆಯ ಬಳಿಕ ಕೊರೊನಾ ತಡೆ ಲಸಿಕೆ ಬಳಸಬಹುದು ಎಂಬುದು ಕೆಲವರ ವಾದ. ಆದರೆ, ನಾವು ತುರ್ತು, ಕಠಿಣ ಸಂದರ್ಭದಲ್ಲಿದ್ದೇವೆ. ಭಾರತದ ಕೋವಿಡ್‌ ತಡೆ ಲಸಿಕೆಯಿಂದ ಯಾರ ಜೀವಕ್ಕೂ ಆಪತ್ತು ಇರುವುದಿಲ್ಲ’ ಎಂದು ಅಬ್ದುಲ್‌ ಅಜೀಂ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.