ADVERTISEMENT

ಸಿ.ಎಂ ಸಿದ್ದರಾಮಯ್ಯ ಜೊತೆ ಕಾರಿನಲ್ಲಿ ಬಿಜೆಪಿಯ ರವಿಕುಮಾರ್ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 23:20 IST
Last Updated 29 ಅಕ್ಟೋಬರ್ 2025, 23:20 IST
ಎನ್‌. ರವಿಕುಮಾರ್‌
ಎನ್‌. ರವಿಕುಮಾರ್‌   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಅವರು ಕಾರಿನಲ್ಲಿ ವಿಧಾನಸೌಧಕ್ಕೆ ಬುಧವಾರ ಬಂದಿದ್ದು ಗಮನ ಸೆಳೆಯಿತು.

ಗಂಭೀರ ವಿಚಾರವೊಂದರ ಕುರಿತು ಮನವಿ ಸಲ್ಲಿಸಲು ರವಿಕುಮಾರ್‌ ಅವರು ಮುಖ್ಯಮಂತ್ರಿಯ ನಿವಾಸ ‘ಕಾವೇರಿ’ಗೆ ತೆರಳಿದ್ದರು. ಅಲ್ಲಿಂದ ಮುಖ್ಯಮಂತ್ರಿಯ ಆಹ್ವಾನದ ಮೇರೆಗೆ ಜೊತೆಗೆ ಕಾರಿನಲ್ಲಿ ವಿಧಾನಸೌಧಕ್ಕೆ ತೆರಳಿ ವಿವರ ನೀಡಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯದಲ್ಲಿ 30ಕ್ಕೂ ಹೆಚ್ಚು ಮಕ್ಕಳು ಮತ್ತು ಯುವಕರು ಅತಿ ವಿರಳವಾದ ‘ಗುಚೇರ್ಸ್‌’ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಇದರ ಚಿಕಿತ್ಸೆಗೆಂದು ಮಾಸಿಕ ಲಕ್ಷಾಂತರ ಹಣ ವೆಚ್ಚವಾಗುತ್ತಿದೆ. ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಹಾಗೂ ಕಾಯಂ ಆಗಿ ಅನುದಾನ ಮೀಸಲಿಡುವಂತೆ ಮನವಿ ಸಲ್ಲಿಸಲು ರವಿಕುಮಾರ್‌ ಅವರು ಬುಧವಾರ ಸಂಜೆ 3.50ರ ವೇಳೆಗೆ ಮುಖ್ಯಮಂತ್ರಿಯ ನಿವಾಸಕ್ಕೆ ತೆರಳಿದ್ದರು.

ADVERTISEMENT

ಆಗ ಮುಖ್ಯಮಂತ್ರಿ, ಮಾತನಾಡೋಣ ಬನ್ನಿ ಎಂದು ಆಹ್ವಾನಿಸಿದ ಕಾರಣಕ್ಕೆ ವಿಧಾನಸೌಧದವರೆಗೆ ಮುಖ್ಯಮಂತ್ರಿಯ ಕಾರಿನಲ್ಲೇ ರವಿಕುಮಾರ್ ಅವರು ಪ್ರಯಾಣಿಸಿ ಸಮಸ್ಯೆ ಬಗ್ಗೆ ವಿವರಿಸಿದರು ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.