ADVERTISEMENT

ಗೃಹ ಸಚಿವರು ಸಲಹೆ ನೀಡಿದ್ದಾರೆ, ಲಘುವಾಗಿ ಮಾತನಾಡಿಲ್ಲ: ಶಾಸಕಿ ಪೂರ್ಣಿಮಾ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 15:40 IST
Last Updated 27 ಆಗಸ್ಟ್ 2021, 15:40 IST
ಪೂರ್ಣಿಮಾ ಶ್ರೀನಿವಾಸ್
ಪೂರ್ಣಿಮಾ ಶ್ರೀನಿವಾಸ್   

ಬೆಂಗಳೂರು: ‘ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಕೃತ್ಯ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಮಹಿಳೆಯರ ಬಗ್ಗೆ ಕಾಳಜಿಯಿಂದ ಸಲಹೆ ನೀಡಿದ್ದಾರೆ. ಲಘುವಾಗಿ ಮಾತನಾಡಿಲ್ಲ’ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್‌ ಹೇಳಿದರು.

‘ಕತ್ತಲಾಗುವ ಸಮಯದಲ್ಲಿ ಯುವತಿ ಅಲ್ಲಿಗೇಕೆ ಹೋಗಬೇಕಿತ್ತು’ ಎಂಬ ಗೃಹ ಸಚಿವರ ಹೇಳಿಕೆಗೆ ಅಪಾರ್ಥ ಕಲ್ಪಿಸಬಾರದು. ನಕಾರಾತ್ಮಕ ಭಾವನೆಯಿಂದ ಈ ಹೇಳಿಕೆ ನೀಡಿಲ್ಲ. ಮಹಿಳೆಯರು ಜಾಗರೂಕರಾಗಿರಬೇಕು ಎಂದಷ್ಟೆ ಹೇಳಿದ್ದಾರೆ’ ಎಂದರು.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಹೆಣ್ಣು ಮಕ್ಕಳ ಓಡಾಟವನ್ನು ನಿರ್ಬಂಧಿಸಲಾಗದು. ರಾತ್ರಿ ಹೊತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಲು ಕಾಮುಕರು ಕಾದಿರುತ್ತಾರೆ. ಎಚ್ಚರಿಕೆಯಿಂದ ಇರಬೇಕು. ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.

ADVERTISEMENT

ಪೊಲೀಸರ ಗಸ್ತು ಹೆಚ್ಚಿಸಬೇಕು. ನಿರ್ಜನ ಪ್ರದೇಶಗಳಲ್ಲಿ ಪೊಲೀಸರು ನಿಯಮಿತವಾಗಿ ಗಸ್ತು ತಿರುಗದೇ ಇರುವುದು ಅಪರಾಧ ಹೆಚ್ಚಳಕ್ಕೆ ಕಾರಣ. ಮೈಸೂರಿನ ಪ್ರಕರಣದಲ್ಲೂ ಅದೇ ರೀತಿ ಆಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.