ADVERTISEMENT

ಕುಮಾರಸ್ವಾಮಿಗೆ ಅಧಿಕಾರ ನಡೆಸುವ ನೈತಿಕ ಹಕ್ಕು ಇಲ್ಲ: ಯಡಿಯೂರಪ್ಪ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 8:30 IST
Last Updated 21 ನವೆಂಬರ್ 2018, 8:30 IST
ನಗರದ ಮೈಸೂರು ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಮುಖಂಡರು, ಕಾರ್ಯಕರ್ತರು
ನಗರದ ಮೈಸೂರು ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಮುಖಂಡರು, ಕಾರ್ಯಕರ್ತರು   

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆಅಧಿಕಾರ ನಡೆಸುವ ನೈತಿಕ ಹಕ್ಕು ಇಲ್ಲ.ಸರ್ಕಾರ ಒಂದುಕುಟುಂಬಕ್ಕೆ ಸಂಪನ್ಮೂಲ ಕ್ರೋಡೀಕರಣ ಮಾಡುತ್ತಿದೆ ಎಂದುಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದರು.

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ, ಶಾಸಕ ಆರ್.ಅಶೋಕ, ಬಿಜೆಪಿ ರಾಜ್ಯ ‍ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಉದಯ ಗರುಡಾಚಾರ್ ಸೇರಿದಂತೆ ಹಲವರು ನಗರದ ಮೈಸೂರು ವೃತ್ತದಲ್ಲಿಪ್ರತಿಭಟನೆ ಕೈಗೊಂಡಿದ್ದಾರೆ.

ಈ ವೇಳೆ ಮಾತನಾಡಿದ ಬಿ.ಎಸ್ಯಡಿಯೂರಪ್ಪ, ಕುಮಾರಸ್ವಾಮಿ ಮಂಗಳವಾರ ವಿಧಾನಸೌಧದಲ್ಲಿ ರಾಜಕೀಯ ದೊಂಬರಾಟ ನಡೆಸಿದ್ದಾರೆ. ಶಾಸಕರ ನಿಧಿಗೆ ನಯಾಪೈಸೆ ಕೊಟ್ಟಿಲ್ಲ.

ADVERTISEMENT

ರೈತರು ಎಷ್ಟೇ ಹೊತ್ತು ಕಾದರೂ ಯಾವುದೇ ಪ್ರಯೋಜನವಾಗಿಲ್ಲ.ಹುಬ್ಬಳ್ಳಿಯಲ್ಲಿಮನೆ ಮಾಡಿದಿರಿ. ಒಂದು ದಿನ ಮನೆಯಲ್ಲಿ ಉಳಿಯಲಿಲ್ಲ. ಚುನಾವಣೆಯಲ್ಲಿ ಗೆದ್ದದ್ದು38. ಆದರೆ, ದಿಮಾಕು ವಿಪರೀತ.ಹೊಸ ಸಿಎಂಗೆ ಅವಕಾಶ ಕೊಡೋಣ ಎಂದು ಐದು ತಿಂಗಳು ಕೈಕಟ್ಟಿ ಕೂತಿದ್ದೆವು. ಇನ್ನು ಅವಕಾಶ ಕೊಡಲ್ಲ. ನಿಮ್ಮನ್ನು ಮನೆಗೆ ಕಳುಹಿಸುವ ತನಕ ಹೋರಾಟ ಮುಂದುವರೆಯಲಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜಕೀಯ ದುಸ್ಥಿತಿಗೆ ಕಾರಣ. ಮಹಿಳೆಯರು ನಿರಂತರ ಚಳವಳಿ ನಡೆಸಬೇಕು. ಹೋರಾಟಕ್ಕೆ ಮಣಿದು ಸಿಎಂ ರಾಜೀನಾಮೆ ನೀಡಬೇಕು. ಇವರಿಂದ ಸರ್ಕಾರದ ಬೊಕ್ಕಸ ದಿವಾಳಿ ಎದ್ದಿದೆ.ನೀರಾವರಿ ಯೋಜನೆಗಳು ಸ್ಥಗಿತ ಆಗಿವೆ ಎಂದರು.

ಕಳೆದ ಆರು ತಿಂಗಳ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಒಬ್ಬರದ್ದೂ ಸಾಲಮನ್ನಾಆಗಿಲ್ಲ.ಸಮ್ಮಿಶ್ರ ಸರ್ಕಾರ ರೈತದ್ರೋಹಿ ಸರ್ಕಾರ. ರೈತರು ಗೂಂಡಾಗಳಾಗಿದ್ದರೆ ವಿಧಾನಸೌಧವೂ ಉಳಿಯುತ್ತಿರಲಿಲ್ಲ, ನಾವು ಇರುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯ ‍ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್ ಹೇಳಿದರು.

ಬ್ಯಾಂಕ್‌ ಒಳಗೆ ಏನು ನಡೆಯುತ್ತಿದೆ? ಈ ಬಗ್ಗೆ ಶ್ವೇತಪತ್ರ ಹೊರಡಿಸಿ. ಸಮ್ಮಿಶ್ರ ಸರ್ಕಾರದ ಮೂಲಕ ಸಿದ್ಧಾಂತಕ್ಕೆ ತಿಲಾಂಜಲಿ ಇಡಲಾಗಿದೆ. ಕುಮಾರಸ್ವಾಮಿ ಅವರು ರೈತ ಮಹಿಳೆಗೆ ಅವಮಾನ ಮಾಡಿದ್ದಾರೆ. ಇವರು ತಮ್ಮ ಶಬ್ದ ಸಂಸ್ಕೃತಿ ಬಗ್ಗೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ಪಾಳೆಗಾರರು ಯಾರು ಎಂಬುದರ ಬಗ್ಗೆ ಚರ್ಚೆ ನಡೆಯಲಿ. ಗೌಡರ ಕುಟುಂಬದ ಸದಸ್ಯರಿಗೆ ಎಲ್ಲ ಆಡಳಿತ ನೀಡಲಾಗಿದೆ. ತಾಜ್ ವೆಸ್ಟೆಂಡ್ ಮೂಲಕ ಕುಮಾರಸ್ವಾಮಿ ಆಡಳಿತ ನಡೆಸುತ್ತಿದ್ದು, ಈ ಮೂಲಕ ಹಿಂದಿನ ಸಿಎಂಗಳಿಗೆ ಅವಮಾನ ಮಾಡಲಾಗಿದೆ ಎಂದು ದೂರಿದರು.

ಬೆಳಗಾವಿ ಸೌಧಕ್ಕೆ ರೈತರು ಮುತ್ತಿಗೆ ಹಾಕಿದ್ದರು. ಸಿಎಂಗೆ ಹಸಿರು ಶಾಲು ಹಾಕಿಕೊಂಡು ರೈತರ ಸಿಎಂ ಎಂದಿದ್ದರು. ಆದರೆ, ಅವರು ವಿಧಾನಸೌಧ, ತಾಜ್ ವೆಸ್ಟೆಂಡ್ ಬಿಟ್ಟು ಹೊರಹೋಗುತ್ತಿಲ್ಲ. ಜೆಡಿಎಸ್ ವಿರೋಧ ಪಕ್ಷ ಆಗಲೂ ಲಾಯಕ್ಕಿಲ್ಲ ಎಂದು ಶಾಸಕ ಆರ್.ಅಶೋಕ ಹೇಳಿದರು.

ರಾಮಕೃಷ್ಣ ಹೆಗಡೆ ಅವರಿಗೆ ಚಪ್ಪಲಿಯಲ್ಲಿ ಹೊಡೆಸಿದ ಕುಟುಂಬ ನಿಮ್ಮದು. ನಿಮ್ಮನ್ನು ಏನು ಅನ್ನಬೇಕು. ಸಿದ್ದರಾಮಯ್ಯ ಅವರು ವಿಧಾನಸೌಧದ ಬಾಗಿಲು ಮುರಿಯಲು ಯತ್ನಿಸಿದ್ದರು. ದುರಂಹಕಾರ, ದರ್ಪ ಬಹಳ ದಿನ ನಡೆಯಲ್ಲ. ಇಡೀ ಸರ್ಕಾರಕುಮಾರಸ್ವಾಮಿ‌ ಪರ ನಿಂತು ಬ್ಯಾಟಿಂಗ್ ಮಾಡುತ್ತಿದೆ. ಕುಮಾರಸ್ವಾಮಿಗೆ ಬುದ್ಧಿ ಹೇಳಬೇಕಿತ್ತು.‌ ಇದು ದುರುಳ ಸರ್ಕಾರ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.