ಬೆಂಗಳೂರು: ‘ಸಿದ್ದರಾಮೋತ್ಸವ ಎನ್ನುವುದು ಸಿದ್ದರಾಮಯ್ಯ ಮತ್ತು ಅವರ ಬಣದ ರಾಜಕೀಯ ಟೂಲ್ ಕಿಟ್. ಮೂಲ ಕಾಂಗ್ರೆಸ್ಸಿಗರ ಸರ್ವ ನಾಶಕವೇ ಇದರ ಉದ್ದೇಶ’
ಎಂದು ಬಿಜೆಪಿ ರಾಜ್ಯ ಘಟಕ ಹೇಳಿದೆ.
ಬಿಜೆಪಿಯ ರಾಜ್ಯ ಘಟಕದ ಅಧಿಕೃತ ಟ್ವಿಟರ್ ಖಾತೆಯಿಂದ ಈ ಕುರಿತು ಶನಿವಾರ ಸರಣಿ ಟ್ವೀಟ್ ಮಾಡಿದ್ದು, ‘ಇಷ್ಟು ವರ್ಷಗಳ ಕಾಲ ಜನ್ಮದಿನವನ್ನು ಆಚರಿಸಿಕೊಳ್ಳದ ಸಿದ್ದರಾಮಯ್ಯ ಈಗ ರಾಜಕೀಯ ಲಾಭಕ್ಕಾಗಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬುವುದು ಹಾಗೂ ವಿಧಾನಸಭಾ ಚುನಾವಣೆ ಎದುರಾಗುತ್ತಿರುವುದು ಕಾಕತಾಳೀಯ ಅಲ್ಲ. ಇದು ವ್ಯವಸ್ಥಿತವಾದ ರಾಜಕೀಯ ಟೂಲ್ ಕಿಟ್. ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ ಸೇರಿದಂತೆ ಮೂಲ ಕಾಂಗ್ರೆಸ್ಸಿಗರನ್ನು ಮಟ್ಟ ಹಾಕುವ ರಹಸ್ಯ ಕಾರ್ಯಸೂಚಿ ಇದರ ಹಿಂದಿದೆ’ ಎಂದು ವಾಗ್ದಾಳಿ ನಡೆಸಲಾಗಿದೆ.
ರಾಹುಲ್ ಗಾಂಧಿ ಸಮ್ಮುಖದಲ್ಲಿ ತಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುವುದು ಸಿದ್ದರಾಮಯ್ಯ ಅವರ ಉದ್ದೇಶ. ಯಾವ ದಾಳವನ್ನು ಯಾವಾಗ ಉರುಳಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಕೆಪಿಸಿಸಿ ಕಚೇರಿಯಲ್ಲಿ ಪಿಸು ಮಾತು ಬಂದಾಗಲೇ ‘ಟೂಲ್ ಕಿಟ್’ ಕಾರ್ಯಾಚರಣೆ ಆರಂಭವಾಗಿತ್ತು. ಆಗಲೇ ಶಿವಕುಮಾರ್ ಎಚ್ಚೆತ್ತು
ಕೊಳ್ಳಬೇಕಿತ್ತು. ಈಗ ಸಿದ್ದರಾಮಯ್ಯ ಮತ್ತೊಂದು ಸುತ್ತಿನ ‘ಟೂಲ್ ಕಿಟ್’ ಪ್ರಹಸನ ಆರಂಭಿಸಿದ್ದು, ದೊಡ್ಡ ಬೇಟೆಯಾಡುವುದು ಖಚಿತ ಎಂದು ಬಿಜೆಪಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.