ಚಿತ್ರ–X
ಬೆಂಗಳೂರು: ಸಾವಿರ ದಿನಗಳಲ್ಲಿ ಸಾವಿರ ಸುಳ್ಳು ಹೇಳಿ ನಾಡಿನ ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಮತ್ತು ಯುವಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಬಿಜೆಪಿ ಕಿಡಿಕಾರಿದೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ನುಂಗಪ್ಪಗಳ ಸರ್ಕಾರಕ್ಕೆ ಸಾವಿರ ದಿನ. ಕನ್ನಡಿಗರಿಗೆ ಸಾವಿರಾರು ಸಮಸ್ಯೆ..ಎಂದು ಬರೆದುಕೊಂಡಿದೆ.
ರೈತರಿಗೆ ನೇಣು ಭಾಗ್ಯ
ಯುವಕರಿಗೆ ಚಿಪ್ಪು ಭಾಗ್ಯ
ಜನರಿಗೆ ದರ ಹೆಚ್ಚಳದ ಬರೆ
ಅಭಿವೃದ್ಧಿ ಶೂನ್ಯ
ಭ್ರಷ್ಟಾಚಾರ
ದಲಿತ ಹಾಗೂ ಶೋಷಿತ ಸಮುದಾಯಕ್ಕೆ ವಂಚನೆ
ಹಗರಣಗಳಿಗೆ ಆದ್ಯತೆ
ಕನ್ನಡಿಗರ ತೆರಿಗೆಗೆ ಕನ್ನ
ಡ್ರಗ್ಸ್ ದಂಧೆಗೆ ರಕ್ಷಣೆ
ಕಾನೂನು ಸುವ್ಯವಸ್ಥೆ ಹಳ್ಳಕ್ಕೆ
ಬಡವರ ಅಕ್ಕಿಗೆ ಕನ್ನ
₹5000 ಕೋಟಿ ಗೃಹಲಕ್ಷ್ಮಿ ಹಣ ಕಾಂಗ್ರೆಸ್ಸಿಗರ ಪಾಲು
ಕೊಟ್ಟ ಭರವಸೆ ಈಡೇರಿಸದೆ ಕನ್ನಡಿಗರಿಗೆ ದ್ರೋಹ..
ಇವು ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರರ್ಥಕ ಸಾವಿರ ದಿನಗಳಲ್ಲಿ ಕನ್ನಡಿಗರಿಗೆ ಕಾಂಗ್ರೆಸ್ ಕೊಟ್ಟ ಸಮಸ್ಯೆಗಳು ಎಂದು ಬಿಜೆಪಿ ಬರೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.