ADVERTISEMENT

ಸುರ್ಜೇವಾಲ, ವೇಣುಗೋಪಾಲ್ ‘ಕುಚುಕು ಕಲೆಕ್ಷನ್‌ ಏಜೆಂಟ್ಸ್’ ಎಂದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ನವೆಂಬರ್ 2023, 13:28 IST
Last Updated 1 ನವೆಂಬರ್ 2023, 13:28 IST
<div class="paragraphs"><p>ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್</p></div>

ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್

   

ಕೃಪೆ: ಟ್ವಿಟರ್ – @BJP4Karnataka

ಬೆಂಗಳೂರು: ಕಾಂಗ್ರೆಸ್ ನಾಯಕರಾದ ರಣದೀಪ್‌ ಸಿಂಗ್‌ ಸುರ್ಜೇವಾಲ ಹಾಗೂ ಕೆ.ಸಿ ವೇಣುಗೋಪಾಲ್‌ ಅವರನ್ನು ‘ಕುಚುಕು ಕಲೆಕ್ಷನ್‌ ಏಜೆಂಟ್ಸ್‘ ಎಂದು ರಾಜ್ಯ ಬಿಜೆಪಿ ಘಟಕ ಲೇವಡಿ ಮಾಡಿದೆ.

ADVERTISEMENT

ತಿಂಗಳ ಮೊದಲ ದಿನವೇ ಕಲೆಕ್ಷನ್ ಎಣಿಸಲು ಬೆಂಗಳೂರಿಗೆ ಬಂದಿದ್ದಾರೆ ಎಂದು ಟೀಕೆ ಮಾಡಿದೆ.

ವೇಣುಗೋಪಾಲ್ ಹಾಗೂ ಸುರ್ಜೇವಾಲ ಅವರು ಸೂಟ್‌ಕೇಸ್‌ ಹಿಡಿದುಕೊಂಡಿರುವ ಪೋಸ್ಟರ್ ಹಂಚಿಕೊಂಡಿದೆ.

ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ಕರ್ನಾಟಕವನ್ನು ಕಾಂಗ್ರೆಸ್‌ ಸರ್ಕಾರ ತನ್ನೆಲ್ಲಾ ಖರ್ಚುಗಳ ಎಟಿಎಂ ಮಾಡಿಕೊಂಡಿದೆ ಎಂಬುದನ್ನು ಕಾಂಗ್ರೆಸ್‌ ಪದೇಪದೇ ಸಾಬೀತುಪಡಿಸುತ್ತಿದೆ ಎಂದು ಹೇಳಿದೆ.

ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರ ವಹಿಸಿದ ಮೊದಲ ವಾರದಲ್ಲೇ ಅಧಿಕಾರಿಗಳ ಜತೆ ಖಾಸಗಿಯಾಗಿ ಕಲೆಕ್ಷನ್‌ ಸಭೆ ನಡೆಸಿದ್ದ ಸುರ್ಜೇವಾಲ ಅವರು ಹಾಗೂ ವಿಶೇಷ ಕಲೆಕ್ಷನ್‌ ಪ್ರತಿನಿಧಿ ಕೆ.ಸಿ ವೇಣುಗೋಪ್‌ ಅವರು ಈಗ ತಿಂಗಳ ಕಲೆಕ್ಷನ್‌ ಎಣಿಸಲು ತಿಂಗಳ ಮೊದಲ ದಿನವೇ ಬೆಂಗಳೂರಿಗೆ ಬಂದಿದ್ದಾರೆ ಎಂದು ಬಿಜೆಪಿ ಬರೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.