ADVERTISEMENT

ವಿಮರ್ಶಕಿ ಬಿ.ಎನ್‌.ಸುಮಿತ್ರಾಬಾಯಿಗೆ ಶೇಷಗಿರಿರಾವ್‌ ವಿಮರ್ಶಾ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 21:15 IST
Last Updated 8 ಫೆಬ್ರುವರಿ 2022, 21:15 IST
ಬಿ.ಎನ್‌.ಸುಮಿತ್ರಾಬಾಯಿ
ಬಿ.ಎನ್‌.ಸುಮಿತ್ರಾಬಾಯಿ   

ಬೆಂಗಳೂರು: ಬಿಎಂಶ್ರೀ ಪ್ರತಿಷ್ಠಾನ ನೀಡುವ 2022ನೇ ಸಾಲಿನ ‘‍ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌ ವಿಮರ್ಶಾ ಪ್ರಶಸ್ತಿ’ಗೆ ವಿಮರ್ಶಕಿ ಬಿ.ಎನ್‌.ಸುಮಿತ್ರಾಬಾಯಿ ಆಯ್ಕೆಯಾಗಿದ್ದಾರೆ.

ಸುಮಿತ್ರಾಬಾಯಿ ಅವರು ಸಂಸ್ಕೃತ ಪ್ರಾಧ್ಯಾಪಕರಾಗಿ 36 ವರ್ಷ ಸೇವೆ ಸಲ್ಲಿಸಿದ್ದಾರೆ. ಸಾರ್ವತ್ರಿಕದೆಡೆಗೆ, ಅಕ್ಕಮಹಾದೇವಿ, ಸರಹದ್ದುಗಳ ಆಚೆ ಈಚೆ, ಸ್ತ್ರೀವಾದಿ ಪ್ರವೇಶಿಕೆ ಸೇರಿ 25 ಪುಸ್ತಕಗಳನ್ನು ಬರೆದಿದ್ದಾರೆ.

‘ಶೇಷಗಿರಿರಾವ್‌ ಆಶಯದಂತೆ ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ, ಜ್ಞಾನಪೀಠ, ಸರಸ್ವತಿ ಸಮ್ಮಾನ್‌, ನೃಪತುಂಗ, ಪಂಪ, ಕುವೆಂಪು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೆ ಆಯ್ಕೆಯಾಗದವರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಡಾ.ಟಿ.ವೆಂಕಟೇಶಮೂರ್ತಿ ಮತ್ತು ಬೆಳಕೆರೆ ಲಿಂಗರಾಜಯ್ಯ ಅವರಿದ್ದ ಸಮಿತಿಯು ಸುಮಿತ್ರಾಬಾಯಿ ಅವರನ್ನು‍ಸರ್ವಾನುಮತದಿಂದ ಪ್ರಶಸ್ತಿಗೆ ಆಯ್ಕೆಮಾಡಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ತಿಳಿಸಿದ್ದಾರೆ.

ADVERTISEMENT

‘ಪ್ರಶಸ್ತಿಯು ₹10 ಸಾವಿರ ನಗದು, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರ ಒಳಗೊಂಡಿರಲಿದೆ. ಈ ತಿಂಗಳ ಕೊನೆಯ ವಾರದಲ್ಲಿ ಬಿಎಂಶ್ರೀ ಕಲಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.