ADVERTISEMENT

ಸರ್ಕಾರದಿಂದ ಇನ್ನು ‘ಬುದ್ಧ ಜಯಂತಿ’ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 15:39 IST
Last Updated 9 ಏಪ್ರಿಲ್ 2025, 15:39 IST
<div class="paragraphs"><p>ಬುದ್ಧ ಜಯಂತಿ </p></div>

ಬುದ್ಧ ಜಯಂತಿ

   

ಬೆಂಗಳೂರು: ಪ್ರತಿ ವರ್ಷ ಬುದ್ಧ ಪೌರ್ಣಿಮೆಯಂದು ರಾಜ್ಯದಾದ್ಯಂತ ಬುದ್ಧ ಜಯಂತಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ.

ಈ ಜಯಂತಿ ಆಚರಿಸಲು ತಗಲುವ ವೆಚ್ಚವನ್ನು ಮಹಾಪುರುಷರ ಜಯಂತಿಗಳ ಆಚರಣೆಗೆ 2025–26ನೇ ಸಾಲಿನಲ್ಲಿ ಒದಗಿಸಿದ ಅನುದಾನದಲ್ಲಿ ಭರಿಸಬೇಕು ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ.

ADVERTISEMENT

ಮಹಾವೀರ, ಕನಕದಾಸ ಸೇರಿದಂತೆ ಈಗಾಗಲೇ 32 ಮಹಾಪುರುಷರ ಜಯಂತಿಗಳನ್ನು ಇಲಾಖೆಯ ವತಿಯಿಂದ ಆಚರಿಸಲಾಗುತ್ತಿದೆ. ಭಗವಾನ್ ಬುದ್ಧರ ಜಯಂತಿಯನ್ನೂ ಇಲಾಖೆಯ ವತಿಯಿಂದಲೇ ಆಚರಿಸಲು ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.