
ಪ್ರಜಾವಾಣಿ ವಾರ್ತೆಬೈರತಿ ಸುರೇಶ್
ಬೆಂಗಳೂರು: ವಿಧಾನಸಭಾ ಕಲಾಪ ಬೆಳಿಗ್ಗೆ 9ರಿಂದ ರಾತ್ರಿಯವರೆಗೂ ನಡೆಸಲಾಗುತ್ತಿದೆ. ಶಾಲಾ ದಿನಗಳಲ್ಲೇ ಇಷ್ಟು ಸಮಯ ಓದಿದ್ದರೆ ಐಎಎಸ್, ಐಪಿಎಸ್ ತೇರ್ಗಡೆಯಾಗಬಹುದಿತ್ತು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ವಿಧಾನಸಭೆಯಲ್ಲಿ ಶುಕ್ರವಾರ ಕಲಾಪ ಆರಂಭವಾದಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಸಮಯಕ್ಕೆ ಸರಿಯಾಗಿ ಹಾಜರಾದ ಶಾಸಕರ ಪಟ್ಟಿ ಓದಿದರು. ಆಗ ಎದ್ದು ನಿಂತ ಸುರೇಶ್ ಅವರು ‘ಬಹುತೇಕ ಸಚಿವರು, ಶಾಸಕರು ಸಮಯಕ್ಕೆ ಸರಿಯಾಗಿ ಸದನಕ್ಕೆ ಬರುತ್ತಿದ್ದಾರೆ. ಈ ಶಿಸ್ತು ಶಾಲಾ ದಿನಗಳಲ್ಲೇ ರೂಢಿಸಿಕೊಳ್ಳಬೇಕಿತ್ತು. ಒಳ್ಳೆಯ ಸ್ಥಾನ ಸಿಗುತ್ತಿತ್ತು’ ಎಂದರು.
‘ಈಗ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನಿಯಂತ್ರಿಸುತ್ತಿದ್ದೀರಲ್ಲ. ಸಾಕು ಬಿಡಿ’ ಎಂಬ ಸಭಾಧ್ಯಕ್ಷ ಖಾದರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.