ADVERTISEMENT

ಲೋಕಸಭೆ ಚುನಾವಣೆ ಬಳಿಕ ಮತ್ತೆ ವಿಸ್ತರಣೆ, ರಮೇಶ ಕಾಂಗ್ರೆಸ್‌ ಮನುಷ್ಯ–ಸಿದ್ದರಾಮಯ್ಯ

‘ಬಿಜೆಪಿ ಮುಳುಗುತ್ತಿರುವ ಹಡಗು, ಅಲ್ಲಿಗೆ ಯಾರೂ ಹೋಗಲ್ಲ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:52 IST
Last Updated 23 ಡಿಸೆಂಬರ್ 2018, 19:52 IST
.
.   

ಜಮಖಂಡಿ (ಬಾಗಲಕೋಟೆ): ‘ಲೋಕಸಭಾ ಚುನಾವಣೆ ಬಳಿಕ ಮತ್ತೆ ಸಚಿವ ಸಂಪುಟ ಪುನಾರಚನೆ ಮಾಡಲಾಗುವುದು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಹಳಷ್ಟು ಜನ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಅರ್ಹತೆ ಹೊಂದಿದ್ದರೂ ಎಲ್ಲರೂ ಮಂತ್ರಿಯಾಗೋಕೆ ಆಗಲ್ಲ. ಇದ್ದ ಆರು ಸಚಿವ ಸ್ಥಾನವನ್ನು ಇಪ್ಪತ್ತು ಜನರಿಗೆ ನೀಡುವುದಕ್ಕೆ ಆಗುತ್ತಾ?’ ಎಂದು ಪ್ರಶ್ನಿಸಿದರು.

‘ಅತೃಪ್ತರು ಬಿಜೆಪಿಗೆ ಹೋಗಲ್ಲ. ಅದು ಕೋಮುವಾದಿ ಪಕ್ಷವಾಗಿದ್ದು, ಮುಳುಗುವ ಹಡಗಾಗಿದೆ’ ಎಂದು ಟೀಕಿಸಿದರು.

ADVERTISEMENT

‘ರಮೇಶ ಕಾಂಗ್ರೆಸ್‌ ಮನುಷ್ಯ’: ‘ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಅವರು ನನ್ನ ಉತ್ತಮ ಸ್ನೇಹಿತರಾಗಿದ್ದು, ಅವರಿಗೆ ಯಾವ ಅಸಮಾಧಾನ, ಅತೃಪ್ತಿಯೂ ಇಲ್ಲ. ಅವರಿಂದ ಪಡೆದ ಸಚಿವ ಸ್ಥಾನವನ್ನು ಅವರ ಕುಟುಂಬದವರಿಗೇ ನೀಡಲಾಗಿದೆ’ ಎಂದರು.

‘ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ತಪ್ಪಿದ್ದರಲ್ಲಿ ನಾಲ್ಕು ಜನರ ಕೈವಾಡವೂ ಇಲ್ಲ; ಐದು ಜನರ ಕೈವಾಡವೂ ಇಲ್ಲ. ಸಚಿವರ ಪಟ್ಟಿಗೆ ರಾಹುಲ್ ಗಾಂಧಿ ಅನುಮೋದನೆ ಮಾಡಿದ್ದಾರೆ. ರಾಮಲಿಂಗಾರೆಡ್ಡಿ ಅವರಿಗೆ ಹಿರಿಯ ಮಂತ್ರಿ ಆಗಬೇಕು ಎಂಬ ಆಕಾಂಕ್ಷೆ ಇತ್ತು, ಆದರೆ, ಮಂತ್ರಿಯಾಗಲಿಲ್ಲ ಎಂಬ ಅಸಮಾಧಾನ ಇದ್ದೇ ಇರುತ್ತದೆ’ ಎಂದರು.

* ರಮೇಶ್ ಜಾರಕಿಹೊಳಿ ರಾಜೀನಾಮೆ ಆಡಿಯೊ ವಿಚಾರ ನನಗೆ ಗೊತ್ತಿಲ್ಲ; ಅವರು ಕಾಂಗ್ರೆಸ್‌ ಮನುಷ್ಯ’

-ಸಿದ್ದರಾಮಯ್ಯ, ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.