ADVERTISEMENT

ತ್ಯಾಜ್ಯ ನಿರ್ವಹಣೆಗೆ ಒಂದೇ ನೀತಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 18:31 IST
Last Updated 6 ಸೆಪ್ಟೆಂಬರ್ 2019, 18:31 IST

ಬೆಂಗಳೂರು: ಬೆಂಗಳೂರು ಹೊರತುಪಡಿಸಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ‘ಏಕ ರೂಪ’ ನಿಯಮಗಳ ಜಾರಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ತ್ಯಾಜ್ಯ ನಿರ್ವಹಣೆಗೆ ‘ಮಾದರಿ ನಿಯಮ’ ರೂಪಿಸಿ ಕೊಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಇದನ್ನು ಮಾದರಿಯಾಗಿ ಇಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ. ಆದರೆ ಶುಲ್ಕ ಸಂಗ್ರಹದಲ್ಲಿ ರಿಯಾಯಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಕಾನೂನು, ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಮಾನವ ಹಕ್ಕುಗಳ ಆಯೋಗ: ಮಾನವ ಹಕ್ಕುಗಳ ಆಯೋಗದ ಧಾರವಾಡ ಪೀಠಕ್ಕೆ ಸದಸ್ಯರೊಬ್ಬರನ್ನು ನಿಯೋಜಿಸುವ ನಿರ್ಧಾರ ಕೈಬಿಡಲಾಗಿದೆ. ಆಯೋಗದ ಅಧ್ಯಕ್ಷ, ಸದಸ್ಯರು ಒಟ್ಟಿಗೆ ಅಲ್ಲಿಗೆ ಭೇಟಿ ನೀಡಿ, ಅರ್ಜಿ ಸ್ವೀಕರಿಸುತ್ತಿದ್ದು, ಇದೇ ವ್ಯವಸ್ಥೆ ಮುಂದು
ವರಿಸುವಂತೆ ಅದರ ಅಧ್ಯಕ್ಷರು ಸಲಹೆ ಮಾಡಿದ್ದರು. ಸದ್ಯಕ್ಕೆ ಈ ಸಲಹೆ ಒಪ್ಪಲಾಗಿದೆ ಎಂದರು.

ADVERTISEMENT

ಇತರ ನಿರ್ಧಾರಗಳು

lಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ವೇತನ ಹೆಚ್ಚಳ

lಔರಾದಕರ್ ಸಮಿತಿ ವರದಿಯಂತೆ ಪೊಲೀಸರಿಗೆ ವೇತನ ಹೆಚ್ಚಳ ಮಾಡಲು ಒಪ್ಪಿಗೆ. ಹಿಂದಿನ ನಿರ್ಧಾರದಂತೆ 1–8–2019ರಿಂದಲೇ ಜಾರಿ.

lಕೊಪ್ಪಳ– ಗಿಣಿಗೇರ ರೈಲು ನಿಲ್ದಾಣ ನಿರ್ಮಾಣ ಯೋಜನೆಗೆ ರಾಜ್ಯದ ಪಾಲು ₹13 ಕೋಟಿ ಬಿಡುಗಡೆ

lವಿಶ್ವೇಶ್ವರಯ್ಯ ಜಲ ನಿಗಮ ಹಾಗೂ ಕಾವೇರಿ ಜಲನಿಗಮವು ಕ್ರಮವಾಗಿ₹735, ₹250 ಕೋಟಿ ಅವಧಿ ಸಾಲ ಪಡೆಯಲು ಒಪ್ಪಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.