ADVERTISEMENT

ಚಿಲ್ಲರೆ ಆಸೆ ತೋರಿಸಿ ₹1.50 ಲಕ್ಷ ಕದ್ದೊಯ್ದ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 19:39 IST
Last Updated 29 ನವೆಂಬರ್ 2019, 19:39 IST

ಬೆಂಗಳೂರು: ರಸ್ತೆಯಲ್ಲಿ ಚಿಲ್ಲರೆ ಬಿದ್ದಿರುವುದಾಗಿ ಹೇಳಿ ವೃದ್ಧರೊಬ್ಬರ ಗಮನ ಬೇರೆಡೆ ಸೆಳೆದು ₹ 1.50 ಲಕ್ಷ ಕದ್ದೊಯ್ಯಲಾಗಿದ್ದು, ಆ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಗುಂಡಪ್ಪ ಎಂಬುವರು ದೂರು ನೀಡಿದ್ದಾರೆ. ಕಳ್ಳರ ಪತ್ತೆಗಾಗಿ ಘಟನಾ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಗುಂಡಪ್ಪ ಅವರು ಎಲ್ಐಸಿ‌ ಕಾಲೊನಿಯ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿ ತಮ್ಮ ನ್ಯಾನೊ ಕಾರಿನಲ್ಲಿ ಇಟ್ಟುಕೊಂಡಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದಿದ್ದ ಆರೋಪಿ, ಚಿಲ್ಲರೆ ಹಣ ಬಿದ್ದಿರುವುದಾಗಿ ಹೇಳಿದ್ದ. ಚಿಲ್ಲರೆ ಹುಡುಕಾಟಕ್ಕಾಗಿ ಗುಂಡಪ್ಪ ಕೆಳಗೆ ಇಳಿದಿದ್ದರು. ಆರೋಪಿ ಕಾರಿನಲ್ಲಿದ್ದ ಹಣದ ಬ್ಯಾಗ್‌ ಕದ್ದು ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.