ವಂಚನೆ
ಬೆಂಗಳೂರು: ಕೃಷಿ ಮತ್ತು ಇತರೆ ಸಾಲ ವಿತರಣೆಯಲ್ಲಿ ₹12.63 ಕೋಟಿ ವಂಚನೆ ಎಸಗಿದ್ದ ಪ್ರಕರಣದಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಇಬ್ಬರು ಸಿಬ್ಬಂದಿ ಸೇರಿ ಮೂವರಿಗೆ ಸಿಬಿಐ ವಿಶೇಷ ನ್ಯಾಯಾಲಯವು 1 ವರ್ಷದಿಂದ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಒಟ್ಟು ₹52 ಲಕ್ಷ ದಂಡ ವಿಧಿಸಿದೆ.
ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮತ್ತು ಅನರ್ಹ ವ್ಯಕ್ತಿಗಳಿಗೆ ಸಾಲ ವಿತರಣೆ ಮಾಡಿದ ಸಂಬಂಧ 2009ರಲ್ಲಿ ಪ್ರಕರಣ ದಾಖಲಾಗಿತ್ತು. ಸಿಂಡಿಕೇಟ್ ಬ್ಯಾಂಕ್‌ನ ಮಂಡ್ಯ ಶಾಖೆಯ ಅಂದಿನ ವ್ಯವಸ್ಥಾಪಕ ಎಚ್.ಎಂ.ಸ್ವಾಮಿ, ಕೊಳ್ಳೇಗಾಲ ಶಾಖೆಯ ಅಂದಿನ ವ್ಯವಸ್ಥಾಪಕ ವಿಠ್ಠಲ ದಾಸ್ ವಿರುದ್ಧ ಬ್ಯಾಂಕ್‌ನ ಮುಖ್ಯ ಜಾಗೃತ ಅಧಿಕಾರಿ ಸಿಬಿಐಗೆ ದೂರು ನೀಡಿದ್ದರು.
‘ಸಿಂಡಿಕೇಟ್ ಜೈ ಕಿಸಾನ್ ಸಾಲ ಯೋಜನೆ ಮತ್ತು ಇತರೆ ಸಾಲ ಯೋಜನೆಗಳಲ್ಲಿ ಇಬ್ಬರು ವ್ಯವಸ್ಥಾಪಕರು ಅಕ್ರಮ ಎಸಗಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅನರ್ಹರಿಗೆ ಸಾಲ ನೀಡುವ ಮೂಲಕ ಬ್ಯಾಂಕ್‌ಗೆ ನಷ್ಟ ಉಂಟು ಮಾಡಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿದ್ದರು. ಅದರಂತೆ 2009ರ ಏಪ್ರಿಲ್‌ನಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.
ಅಕ್ರಮದಲ್ಲಿ ಮತ್ತೊಬ್ಬ ಖಾಸಗಿ ವ್ಯಕ್ತಿ ಭಾಗಿಯಾಗಿರುವುದು ಸಿಬಿಐ ತನಿಖೆಯಲ್ಲಿ ಪತ್ತೆಯಾಗಿತ್ತು. 2010ರ ಡಿಸೆಂಬರ್‌ನಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಈಚೆಗೆ ತೀರ್ಪು ನೀಡಿತ್ತು. ಈಗ ಶಿಕ್ಷೆ ಪ್ರಕಟಿಸಿದೆ.
ಎಚ್.ಎಂ. ಸ್ವಾಮಿ
ಸಿಂಡಿಕೇಟ್ ಬ್ಯಾಂಕ್ ಮಂಡ್ಯ ಶಾಖೆಯ ಅಂದಿನ ವ್ಯವಸ್ಥಾಪಕ
3 ವರ್ಷ ಜೈಲು ಶಿಕ್ಷೆ
₹1.50 ಲಕ್ಷ ದಂಡ
ಸಿಂಡಿಕೇಟ್ ಬ್ಯಾಂಕ್ ಕೊಳ್ಳೇಗಾಲ ಶಾಖೆಯ ಅಂದಿನ ವ್ಯವಸ್ಥಾಪಕ
1 ವರ್ಷ ಜೈಲು ಶಿಕ್ಷೆ
₹50,000 ದಂಡ
3 ವರ್ಷ ಜೈಲು ಶಿಕ್ಷೆ
₹50 ಲಕ್ಷ ದಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.