ADVERTISEMENT

ಯಡಿಯೂರಪ್ಪ ಭಾಷಣ ಮಾಡಲು ಹೋದಾಗ ಅಮಿತ್ ಶಾಗೆ ಪತ್ರ ನೀಡಿದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 16:23 IST
Last Updated 7 ಮಾರ್ಚ್ 2025, 16:23 IST
<div class="paragraphs"><p>ಅಮಿತ್ ಶಾ </p></div>

ಅಮಿತ್ ಶಾ

   

–ಪಿಟಿಐ ಚಿತ್ರ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಬಿಜೆಪಿಯ ಯತ್ನಾಳ ಬಣದ ಪ್ರಮುಖ ನಾಯಕರಾದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.

ADVERTISEMENT

ಶುಕ್ರವಾರ ನಡೆದ ಮಾರತ್‌ಹಳ್ಳಿಯ ಎಸ್‌ವಿಎಂ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಿದ್ದರು. ಅವರ ಪಕ್ಕದಲ್ಲೇ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಳಿತಿದ್ದರು. ಭಾಷಣ ಮಾಡಲು ಯಡಿಯೂರಪ್ಪನವರು ಎದ್ದು ಹೋದಾಗ, ಅಮಿತ್ ಶಾ ಪಕ್ಷದಲ್ಲಿದ್ದ ಕುರ್ಚಿಗೆ ಬಂದು ಕುಳಿತ ಲಿಂಬಾವಳಿ, ಪುಟ್ಟ ಪತ್ರವನ್ನು ನೀಡಿದರು. ಆಗ, ಶಾ ಅವರು ದೆಹಲಿಗೆ ಬರುವಂತೆ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಪತ್ರದಲ್ಲಿ ಅವರು ಏನು ಬರೆದಿದ್ದರು ಎಂಬ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ರಾಜ್ಯದ ಬಿಜೆಪಿಯಲ್ಲಿನ ಗೊಂದಲಮಯ ವಾತಾವರಣದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇದಕ್ಕೆ ಮುನ್ನ ಬಿ.ಎಸ್‌.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರು ಅಮಿತ್ ಶಾ ಅವರ ಜತೆ ಪ್ರತ್ಯೇಕ ಮಾತುಕತೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.