ADVERTISEMENT

ಕೇಂದ್ರದ ಸಕ್ಷಮ್‌ ಯೋಜನೆ ಅಡಿ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ 17,454 ಟಿ.ವಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 16:49 IST
Last Updated 16 ಫೆಬ್ರುವರಿ 2026, 16:49 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಕೇಂದ್ರ ಸರ್ಕಾರದ ಸಕ್ಷಮ್‌ ಯೋಜನೆ ಅಡಿ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ 17,454 ಎಲ್‌ಇಡಿ ಟಿ.ವಿಗಳನ್ನು ಪೂರೈಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ.

ಸಕ್ಷಮ್‌ ಯೋಜನೆಯ ಅಂಗನವಾಡಿ ಕಟ್ಟಡಗಳ ಉನ್ನತೀಕರಣದಡಿ ಆರ್ಥಿಕ ಇಲಾಖೆಯ ಒಪ್ಪಿಗೆ ನಂತರ 2024ರ ನವೆಂಬರ್‌ನಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿತ್ತು. ಬಳಿಕ, ಜಿಇಎಂ ಪೋರ್ಟಲ್‌ ಮೂಲಕ ಟೆಂಡರ್‌ ಆಹ್ವಾನಿಸಿ ನಿಯಮಾನುಸಾರ ಟಿ.ವಿಗಳನ್ನು ಖರೀದಿಸಿ, ಸರಬರಾಜು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ADVERTISEMENT

‘ಪ್ರಜಾವಾಣಿ’ಯ ಫೆ.6ರ ಸಂಚಿಕೆಯಲ್ಲಿ ಪ್ರಕಟವಾದ ‘ಟೆಂಡರ್‌ ಬಿಟ್ಟು ಟಿ.ವಿ ಖರೀದಿ’ ವರದಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆ ಅಡಿ 15,000 ಟಿ.ವಿ ಖರೀದಿಸಲಾಗಿದೆ ಎಂದಿದೆ. ಆದರೆ, ಪೂರೈಸಿದ್ದು 17,454. ಯಾವುದೇ ರೀತಿಯ ಖರೀದಿ ನಿಯಮಗಳ ಉಲ್ಲಂಘನೆ ಆಗಿಲ್ಲ ಎಂದು ಇಲಾಖೆಯ ನಿರ್ದೇಶಕರು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.