ಬೆಂಗಳೂರು: ಎಂಜಿನಿಯರಿಂಗ್ ಎರಡನೇ ವರ್ಷಕ್ಕೆ ನೇರ ಪ್ರವೇಶ ಕಲ್ಪಿಸುವ ಡಿಪ್ಲೊಮಾ ಸಿಇಟಿ ಅಂತಿಮ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಕೊನೆ ಸುತ್ತಿನಲ್ಲಿ 860 ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಿಗೆ ಸೀಟು ಹಂಚಿಕೆ ಮಾಡಲಾಗಿದ್ದು, ಆ.25ರಿಂದ 27ರವರೆಗೆ ಚಲನ್ ಡೌನ್‌ಲೋಡ್ ಮಾಡಿಕೊಂಡು, ಆ.28ರ ಒಳಗೆ ಶುಲ್ಕ ಪಾವತಿಸಬೇಕು. ಮುಂಗಡ ಠೇವಣಿ ಕಟ್ಟಿದವರ ಹಣವನ್ನು ಶುಲ್ಕದ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಸೀಟು ಖಾತರಿ ಚೀಟಿಯನ್ನು 29ರ ಒಳಗೆ ಡೌನ್‌ಲೋಡ್ ಮಾಡಿಕೊಂಡು 30ರ ಒಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಕೆಇಎ ಸೂಚಿಸಿದೆ.
ಎಂಡಿಎಸ್ ಸೀಟು: ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಲಭ್ಯವಿರುವ ಸೀಟುಗಳಿಗೆ ಕೊನೆಯ ಸುತ್ತಿನ ಸೀಟು ಹಂಚಿಕೆ ಮಾಡುತ್ತಿದ್ದು, ಅರ್ಹರು ಆ.24ರ ಒಳಗೆ ಅರ್ಜಿ ಸಲ್ಲಿಸಬಹುದು.
ಕೆಲ ಕೋರ್ಸ್‌ಗಳ ಸೇರ್ಪಡೆ: 14 ಬಿಎಸ್‌ಸಿ ನರ್ಸಿಂಗ್, 12 ಆಯುರ್ವೇದ ಮತ್ತು ಎರಡು ವಾಸ್ತುಶಿಲ್ಪಶಾಸ್ತ್ರ ಕಾಲೇಜುಗಳು ಹೆಚ್ಚುವರಿಯಾಗಿ ಸೀಟು ಲಭ್ಯತಾ ಪಟ್ಟಿ ಸಲ್ಲಿಸಿದ್ದು, ಈ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಆಸಕ್ತಿ ಇರುವವರು ಸೀಟುಗಳ ಮಾಹಿತಿ ಪಡೆದು ಆಯ್ಕೆ ದಾಖಲಿಸಬಹುದು ಎಂದು ಕೆಇಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.