ಇಸ್ರೊ
ರಾಯಿಟರ್ಸ್ ಚಿತ್ರ
ಬೆಂಗಳೂರು: ಚಂದ್ರಯಾನ–3 ರ ಲ್ಯಾಂಡರ್ ಮತ್ತು ರೋವರ್ ನಡೆಸಿರುವ ಪ್ರಯೋಗಗಳ ದತ್ತಾಂಶದ ವಿಶ್ಲೇಷಣೆ ಕಾರ್ಯದಲ್ಲಿ ಭಾಗವಹಿಸುವಂತೆ ವಿಜ್ಞಾನಿಗಳಿಗೆ ಇಸ್ರೊ ಆಹ್ವಾನ ನೀಡಿದೆ.
2023 ರ ಜುಲೈ 14 ರಂದು ಚಂದ್ರಯಾನ–3 ನೌಕೆಯನ್ನು ಉಡಾವಣೆ ಮಾಡಲಾಗಿತ್ತು.
ಈ ಪ್ರಯೋಗಗಳ ದತ್ತಾಂಶವನ್ನು ಆಧರಿಸಿ ವಿಶ್ಲೇಷಣೆ ನಡೆಸಲು ಪ್ರಸ್ತಾವನೆ ಸಲ್ಲಿಸುವಂತೆ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ ಇಸ್ರೊ ಮನವಿ ಮಾಡಿದೆ. ಪ್ರಸ್ತಾವನೆ ಸಲ್ಲಿಸಲು ಅಕ್ಟೋಬರ್ 21 ಕೊನೆಯ ದಿನ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.