ಮೈಸೂರು: ಚೆನ್ನೈ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಮಂಗಳವಾರ ನಗರ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಚೆನ್ನೈ– ಬೆಂಗಳೂರು ನಡುವೆ ಸಂಚರಿಸುತ್ತಿದ್ದ ರೈಲನ್ನು ಮೈಸೂರುವರೆಗೂ ವಿಸ್ತರಿಸಲಾಗಿದೆ. ಸಂಸದ ಪ್ರತಾಪ ಸಿಂಹ ಚಾಲನೆ ನೀಡಿದರು. ಮೈಸೂರಿನಿಂದ ಬೆಳಿಗ್ಗೆ 4.45ಕ್ಕೆ ಹೊರಟು, 7.45ಕ್ಕೆ ಬೆಂಗಳೂರು ಸೇರಲಿದೆ. ಬೆಂಗಳೂರಿನಿಂದ ರಾತ್ರಿ 8.10 ಕ್ಕೆ ಹೊರಟು, ರಾತ್ರಿ 11.30ಕ್ಕೆ ಮೈಸೂರು ಸೇರಲಿದೆ. ಕೆಂಗೇರಿ, ರಾಮ ನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಪಾಂಡವಪುರದಲ್ಲಿ ನಿಲುಗಡೆ ಇರುತ್ತದೆ.
‘ಮೆಮು’ ಸಮಯ ಬದಲು: ‘ಮೆಮು’ ರೈಲು ಸಂಚರಿಸುತ್ತಿರುವ ಸಮಯದಲ್ಲೇ ಚೆನ್ನೈ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಸಂಚರಿಸುವ ಕಾರಣ, ಮೆಮು ರೈಲಿನ ಸಮಯ ಬದಲಾವಣೆ ಮಾಡುವ ಸಾಧ್ಯತೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.