ADVERTISEMENT

ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕರಲ್ಲ; ಸಂಶೋಧಕ ಚಿದಾನಂದ ಮೂರ್ತಿ ಅಭಿಮತ

‘ಕೆಳದಿ ಶಿವಪ್ಪ ನಾಯಕ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 19:45 IST
Last Updated 9 ಡಿಸೆಂಬರ್ 2018, 19:45 IST
ಎಂ. ಚಿದಾನಂದಮೂರ್ತಿ
ಎಂ. ಚಿದಾನಂದಮೂರ್ತಿ   

ಶಿವಮೊಗ್ಗ: ಬಸವಣ್ಣ ವೀರಶೈವ, ಲಿಂಗಾಯತ ಧರ್ಮ ಸ್ಥಾಪಕರಲ್ಲ. ಅವರಿಗಿಂತಲೂ ಮೊದಲಿನ ದಾಖಲೆಗಳಲ್ಲಿ ಈ ಎರಡು ಪದಗಳ ಬಳಕೆ ಕಾಣಬಹುದು. ಬಸವಣ್ಣ ಧರ್ಮಕ್ಕೆ ಕಾಯಕಲ್ಪ ನೀಡಿದವರುಎಂದು ಸಂಶೋಧಕ ಎಂ. ಚಿದಾನಂದಮೂರ್ತಿ ವಿಶ್ಲೇಷಿಸಿದರು.

ಅಖಿಲಭಾರತ ವೀರಶೈವ ಮಹಾಸಭಾ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ‘ಕೆಳದಿ ಶಿವಪ್ಪ ನಾಯಕ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಬಸವಣ್ಣ, ರೇವಣಸಿದ್ದರು ಸಮಕಾಲಿನರು. ವೀರಶೈವ–ಲಿಂಗಾಯತ ಧರ್ಮ ಪ್ರಚುರಪಡಿಸಿದರು. ಇಬ್ಬರೂ ವಾಸ್ತವ ಪುರುಷರು. ಈ ಭೂಮಿಯಲ್ಲಿ ಬದುಕಿದ್ದವರು. ರೇಣುಕಾಚಾರ್ಯರು ಕಾಲ್ಪನಿಕ ವ್ಯಕ್ತಿ. ಕೈಲಾಸ ವಾಸಿ ಎಂದು ಪ್ರತಿಪಾದಿಸಿದರು.

ADVERTISEMENT

ವೀರಶೈವ, ಲಿಂಗಾಯತ ಎರಡೂ ಒಂದೇ. ಯಾವುದೇ ವ್ಯತ್ಯಾಸ ಇಲ್ಲ. ಬಸವಣ್ಣನವರೇವಚನಗಳಲ್ಲಿ ತಾವುವೀರಶೈವರು ಎಂದು ಉಲ್ಲೇಖಿಸಿದ್ದಾರೆ. ಬಸವಣ್ಣನ ತತ್ವ, ವಚನ, ಆದರ್ಶಗಳು ಇಂದಿಗೂ ದಾರಿದೀಪ. ನುಡಿದಂತೆ ನಡೆದಿದ್ದ ಅಂಥವರನ್ನು ಜನರು ಸ್ಮರಿಸಿದರೆ ಸಾಲದು, ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.