ADVERTISEMENT

ಮಂಗಳೂರು ಪ್ರಕರಣ | ಏಕಕಾಲಕ್ಕೆ ಸಿಐಡಿ, ನ್ಯಾಯಾಂಗ ತನಿಖೆ: ಬಿ.ಎಸ್. ಯಡಿಯೂರಪ್ಪ

ಸಿಐಡಿ, ನ್ಯಾಯಾಂಗ ತನಿಖೆ ನಡೆಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 14:40 IST
Last Updated 23 ಡಿಸೆಂಬರ್ 2019, 14:40 IST
ಬಿ. ಎಸ್. ಯಡಿಯೂರಪ್ಪ
ಬಿ. ಎಸ್. ಯಡಿಯೂರಪ್ಪ   

ಶಿವಮೊಗ್ಗ:ಮಂಗಳೂರು ಘಟನೆ ಕುರಿತು ಏಕಕಾಲಕ್ಕೆ ಸಿಐಡಿ ಹಾಗೂನ್ಯಾಯಾಂಗತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಹೇಳಿದರು.

ನಗರದಲ್ಲಿ ಸೋಮವಾರ ಅವರು ಸುದ್ದಿಗಾರರ ಜತೆ ಮಾತನಾಡಿ, ಮಂಗಳೂರುಗಲಭೆಗೆಕೇರಳದಿಂದ ಬಂದವರೇನೇರ ಕಾರಣ. ಹತ್ತಿರದ ಪೊಲೀಸ್ ಠಾಣೆಗೆ ಕೆಲವರು ಬೆಂಕಿ ಹಚ್ಚಲುಯತ್ನಿಸಿದಕಾರಣಕ್ಕೆಗೋಲಿಬಾರ್ಮಾಡಲಾಗಿದೆ. ಕಾನೂನು ಕೈಗೆತ್ತಿಕೊಂಡರೆ ಸುಮ್ಮನೆ ಬಿಡಲಾಗದು. ಈ ವಿಚಾರ ಇಟ್ಟುಕೊಂಡು ವಿರೋಧ ಪಕ್ಷಗಳು ಗೃಹ ಸಚಿವರ ರಾಜೀನಾಮೆ ಕೇಳುತ್ತಿವೆ. ತಲೆ ಕಟ್ಟವರು ಇಂತಹ ಒತ್ತಾಯ ಮಾಡುತ್ತಾರೆ ಎಂದು ಕುಟುಕಿದರು.

ದೇಶದ ಮುಸ್ಲಿಮರು ಕಾಯ್ದೆಗೆ ಹೆದರುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಕಾಯ್ದೆ ವಿರೋಧಿಸುವರುಎಲ್ಲಿ ಮುಸ್ಲಿಮರಿಗೆ ತೊಂದರೆಯಾಗುತ್ತಿದೆ ಎಂದು ಖಚಿತವಾಗಿ ಹೇಳಬೇಕು.ಆದರೆ, ಯಾರೂ ಬಾಯಿ ಬಿಡುತ್ತಿಲ್ಲ.ಶಾಂತಿಯುತ ಪ್ರತಿಭಟನೆಗೆ ಯಾವ ಅಭ್ಯಂತರವೂ ಇಲ್ಲ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

ADVERTISEMENT

ಮುಂದಿನ ಬಜೆಟ್‌ನಲ್ಲಿ ಸಾವಯವ ಕೃಷಿಗೆ ಆದ್ಯತೆ ನೀಡಲಾಗುವುದು. ನೀರಾವರಿ ಕ್ಷೇತ್ರಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿರುವ 50 ಸಾವಿರ ಸಾವಯವ ಕುಟುಂಬಗಳ ಸಂಖ್ಯೆ 5 ಲಕ್ಷಕ್ಕೆ ಹೆಚ್ಚಿಸಲು ಶ್ರಮಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.