ADVERTISEMENT

ಸ್ನೇಹದ ಬಂಧ ಬೆಸೆದಿತ್ತು ಅನುಬಂಧ

ಸಂಧ್ಯಾ ಹೆಗಡೆ
Published 13 ನವೆಂಬರ್ 2019, 23:01 IST
Last Updated 13 ನವೆಂಬರ್ 2019, 23:01 IST
ನಿರಂಜನ ಕಬ್ಬೇರ
ನಿರಂಜನ ಕಬ್ಬೇರ   

ಶಿರಸಿ: ಸ್ನೇಹದ ಬಂಧ ಆ ಇಬ್ಬರು ಮಕ್ಕಳನ್ನು ಬೆಸೆದಿತ್ತು. ಆ ಹುಡುಗ ನಿತ್ಯ ಶಾಲೆಗೆ ಬರುವಾಗ ಅಂಗವಿಕಲೆಯಾಗಿದ್ದ ಸ್ನೇಹಿತೆಯ ಮನೆಗೆ ಹೋಗಿ, ಆಕೆಯ ಸ್ಕೂಲ್ ಬ್ಯಾಗ್ ಹೊತ್ತುಕೊಂಡು, ಅವಳ ಕೈ ಹಿಡಿದು ಶಾಲೆಗೆ ಕರೆತರುತ್ತಿದ್ದ.

ತಾಲ್ಲೂಕಿನ ತಿಗಣಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಪ್ರಾರ್ಥನಾ ಗೌಡ ಚಿಕ್ಕಂದಿನಿಂದಲೇ ಬೆನ್ನುಹುರಿ, ಕಾಲಿನ ತೊಂದರೆ ಅನುಭವಿಸುತ್ತಿದ್ದಳು. ಆಕೆಯ ಆತ್ಮೀಯ ಸ್ನೇಹಿತನಾಗಿದ್ದ, ಅವಳದೇ ತರಗತಿಯ ನಿರಂಜನ ಕಬ್ಬೇರ, ಪ್ರತಿದಿನ ಶಾಲೆಗೆ ಬರುವಾಗ ಹಾಗೂ ಸಂಜೆ ತಿರುಗಿ ಮನೆಗೆ ಹೋಗುವಾಗ ಆಕೆಗೆ ಜೊತೆಯಾಗುತ್ತಿದ್ದ.

‘ಪ್ರಾರ್ಥನಾ ಮೂರನೇ ತರಗತಿಯಲ್ಲಿರುವಾಗಿನಿಂದ ಈ ಕಾಯಕವನ್ನು ತಪಸ್ಸಿನಂತೆ ಮಾಡುತ್ತಿದ್ದ ನಿರಂಜನ, ಆಕೆಯ ಕೊನೆಯ ದಿನಗಳವರೆಗೂ ಇದನ್ನು ಮುಂದುವರಿಸಿದ. ಕೆಲ ತಿಂಗಳುಗಳ ಹಿಂದೆ ಆಕೆ ಅಸುನೀಗಿದಳು. ಅದಕ್ಕೂ ಮುನ್ನ ಆಕೆ, ಅಮ್ಮನ ಬಳಿ ನಿರಂಜನನಿಗೆ ಅಂಗಿ ಹೊಲಿಸಿಕೊಡುವಂತೆ ಕೋರಿಕೊಂಡಿದ್ದಳಂತೆ. ನಾಲ್ಕೈದು ದಿನ ಊಟ, ತಿಂಡಿ ಬಿಟ್ಟು ಕುಳಿತಿದ್ದ ನಿರಂಜನನಿಗೆ ಈಗಲೂ ಪ್ರಾರ್ಥನಾ ನೆನಪು ಮಾತ್ರ ಹಸಿರಾಗಿದೆ’ ಎನ್ನುತ್ತಾರೆ ಶಿಕ್ಷಕ ಮಾರುತಿ ಉಪ್ಪಾರ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.