ADVERTISEMENT

ಹಸುಗಳಿಗೆ ನೀರು ಕುಡಿಸಲು ಹೋಗಿ ಕಾಲು ಜಾರಿ ಬಿದ್ದು ಸಹೋದರರ ಸಾವು

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 16:14 IST
Last Updated 1 ಜುಲೈ 2020, 16:14 IST
ಚಿಕ್ಕಜಾಜೂರು ಸಮೀಪದ ದಾಸರಹಳ್ಳಿ ಬಳಿಯಿರುವ ಕಲ್ಲಿನ ಕ್ವಾರೆಗೆ ಬುಧವಾರ ಸಂಜೆ ಬಿದ್ದ ಮಕ್ಕಳ ಶವವನ್ನು ವೀಕ್ಷಿಸಲು ಬಂದ ಜನ ಸಮೂಹ.
ಚಿಕ್ಕಜಾಜೂರು ಸಮೀಪದ ದಾಸರಹಳ್ಳಿ ಬಳಿಯಿರುವ ಕಲ್ಲಿನ ಕ್ವಾರೆಗೆ ಬುಧವಾರ ಸಂಜೆ ಬಿದ್ದ ಮಕ್ಕಳ ಶವವನ್ನು ವೀಕ್ಷಿಸಲು ಬಂದ ಜನ ಸಮೂಹ.   

ಚಿಕ್ಕಜಾಜೂರು: ಹಸುಗಳಿಗೆ ಕಲ್ಲಿನ ಕ್ವಾರಿಯಲ್ಲಿ ಸಂಗ್ರಹಗೊಂಡಿದ್ದ ನೀರು ಕುಡಿಸಲು ಹೋಗಿ ಕಾಲು ಜಾರಿ ಬಿದ್ದು ಬುಧವಾರ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.

ಸಮೀಪದ ದಾಸರಹಳ್ಳಿಯ ಅಬ್ಬಿಗೆರೆ ಗೊಲ್ಲರಹಟ್ಟಿ ಗ್ರಾಮದ ಜಯಪ್ಪ ಅವರ ಪುತ್ರರಾದ ನಂದನ್‌ (14), ಪವನ್‌ (12) ಮೃತಪಟ್ಟವರು.

ಒಬ್ಬ ಬಾಲಕ ಕಾಲು ಜಾರಿ ಬಿದ್ದು, ನೀರಿನಲ್ಲಿ ಮುಳುಗುತ್ತಿದ್ದಂತೆ ಆತನನ್ನು ರಕ್ಷಣೆ ಮಾಡಲು ಹೋದ ಮತ್ತೊಬ್ಬ ಬಾಲಕನೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.ಗ್ರಾಮಸ್ಥರು ಮೃತ ದೇಹಗಳನ್ನು ಹೊರಗೆ ತೆಗೆದಿದ್ದಾರೆ ಎಂದು ಪಿಎಸ್‌ಐ ಮೋಹನ್‌ಕುಮಾರ್‌ ತಿಳಿಸಿದ್ದಾರೆ.

ADVERTISEMENT

ಡಿವೈಎಸ್ಪಿ ಪಾಂಡುರಂಗಪ್ಪ, ಸಿಪಿಐ ರವೀಶ್‌, ತಹಶೀಲ್ದಾರ್‌ ನಾಗರಾಜ್‌ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.