ಕಳಸ: ಮತ್ತೆ ಗುಹೆಯಲ್ಲಿ ವಾಸ ಮಾಡಲು ಆರಂಭಿಸಿರುವ ಬಲಿಗೆಯ ಅನಂತ ಅವರ ಕುಟುಂಬಕ್ಕೆ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಪ್ರಯತ್ನ ಮುಂದುವರಿಸಿದ್ದಾರೆ.
‘ಕಳಸದ ಕೆನರಾ ಬ್ಯಾಂಕಿನಲ್ಲಿ ಅನಂತ ಅವರ ಪತ್ನಿ ಹೆಸರಿನಲ್ಲಿ ಉಳಿತಾಯ ಖಾತೆ ತೆರೆಯಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ಅವರಿಗೆ ಮನೆ ಮಂಜೂರು ಆದಾಗ ಈ ಖಾತೆಗೆ ಹಣ ಸಂದಾಯ ಆಗುತ್ತದೆ’ ಎಂದು ಕಳಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್ ತಿಳಿಸಿದರು.
‘ಅನಂತ ಅವರ ಕುಟುಂಬದ ಪಡಿತರ ಚೀಟಿಯನ್ನು ಚಾಲ್ತಿಗೆ ತರಲಾಗಿದೆ. ಆ ಕುಟುಂಬಕ್ಕೆ ಒಂದು ತಿಂಗಳ ಪಡಿತರ ಕೂಡ ನೀಡಲಾಗಿದೆ. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲಾಗುತ್ತಿದೆ. ಉಪ ವಿಭಾಗಾಧಿಕಾರಿಗಳ ಸೂಚನೆಯಂತೆ ಒಂದೆರಡು ದಿನಗಳಲ್ಲೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಕಂದಾಯ ನಿರೀಕ್ಷಕ ಅಜ್ಜೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.