ADVERTISEMENT

ಚಿಕ್ಕಬಳ್ಳಾಪುರ | ಮಳೆಗಾಲ ಆರಂಭಗೊಂಡು ತಿಂಗಳಾದರೂ 49 ಗ್ರಾಮಗಳಲ್ಲಿ ನೀರಿಲ್ಲ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 19:42 IST
Last Updated 11 ಜುಲೈ 2019, 19:42 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಂಗಟ್ಟದಲ್ಲಿ ಗ್ರಾಮಸ್ಥರು ಟ್ಯಾಂಕರ್‌ಗಳಿಂದ ನೀರು ಸಂಗ್ರಹಿಸಲು ಇಟ್ಟಿರುವ ಡ್ರಮ್‌ಗಳು
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಂಗಟ್ಟದಲ್ಲಿ ಗ್ರಾಮಸ್ಥರು ಟ್ಯಾಂಕರ್‌ಗಳಿಂದ ನೀರು ಸಂಗ್ರಹಿಸಲು ಇಟ್ಟಿರುವ ಡ್ರಮ್‌ಗಳು   

ಚಿಕ್ಕಬಳ್ಳಾಪುರ: ಮಳೆಗಾಲ ಆರಂಭಗೊಂಡು ಒಂದೂವರೆ ತಿಂಗಳಾದರೂ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಹಾಹಾಕಾರ ತಹಬದಿಗೆ ಬಂದಿಲ್ಲ. ಇಂದಿಗೂ ತಾಲ್ಲೂಕಿನ 49 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಆ ಪೈಕಿ 19 ಹಳ್ಳಿಗಳಿಗೆ ಟ್ಯಾಂಕರ್, 30 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಸಹಾಯದಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

ಹೊನ್ನೇನಹಳ್ಳಿ, ಮುದ್ದಹಳ್ಳಿ, ಅಂಗಟ್ಟ, ಕುಪ್ಪಹಳ್ಳಿ, ಗುವ್ವಲಕಾನಹಳ್ಳಿ, ಗುಂತಪ್ಪನಹಳ್ಳಿ, ಸೊಪ್ಪಹಳ್ಳಿ, ಸಾದೇನಹಳ್ಳಿ, ಕೊತ್ತನೂರು, ಚೊಕ್ಕಹಳ್ಳಿಗಳಲ್ಲಿ ಜನರು ನೀರಿಗಾಗಿ ಪರದಾಡುವಂತಾಗಿದೆ.

ಅಂತರ್ಜಲದ ತೀವ್ರ ಕೊರತೆಯಿಂದ ಶೇ 60 ರಷ್ಟು ಹೊಸ ಕೊಳವೆಬಾವಿಗಳು ವಿಫಲವಾಗಿವೆ. ಸದ್ಯ ನೀರಿನ ಸಮಸ್ಯೆ ಬಗೆಹರಿಸಲು ತಾಲ್ಲೂಕು ಆಡಳಿತ ಹೆಣಗಾಡುತ್ತಿದೆ. ಆದರೆ ಸ್ಥಳೀಯ ಶಾಸಕ ಡಾ.ಕೆ.ಸುಧಾಕರ್ ಅವರು ರಾಜೀನಾಮೆ ಆಟದಲ್ಲಿ ಮುಳುಗಿದ್ದಾರೆ ಎನ್ನುವುದು ಜನರ ಆಕ್ಷೇಪ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.