ADVERTISEMENT

5, 8, 9ನೇ ತರಗತಿಗಳ ಬೋರ್ಡ್ ಪರೀಕ್ಷೆ ಮುಂದೂಡಿಕೆ: ಶಿಕ್ಷಣ ಇಲಾಖೆ ಆದೇಶ

ಇಂದು ಇಲಾಖೆಯ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 13:20 IST
Last Updated 12 ಮಾರ್ಚ್ 2024, 13:20 IST
<div class="paragraphs"><p>–ಸಂಗ್ರಹ ಚಿತ್ರ</p></div>

–ಸಂಗ್ರಹ ಚಿತ್ರ

   

ಬೆಂಗಳೂರು: ಇದೇ ಮಾರ್ಚ್‌ 13ರಿಂದ 16ವರೆಗೆ ನಡೆಯಬೇಕಿದ್ದ 5, 8 ಹಾಗೂ 9ನೇ ತಗರಗತಿ ಬೋರ್ಡ್‌ ಪರೀಕ್ಷೆಗಳನ್ನು ಮುಂದೂಡಲಾಗಿದೆ. 

ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿರುವ ಕಾರಣ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಜಂಟಿಯಾಗಿ ಮಾಹಿತಿ ನೀಡಿವೆ.

ADVERTISEMENT

2023–24ನೇ ಸಾಲಿನ 5, 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು (ಸಂಕಲನಾತ್ಮಕ ಮೌಲ್ಯಾಂಕನ/ಎಸ್‌ಎ–2) ಮಾರ್ಚ್‌ 11ರಿಂದ ಆರಂಭವಾಗಿದ್ದವು. ಈಗಾಗಲೇ ಎರಡು ವಿಷಯಗಳ ಪರೀಕ್ಷೆಗಳು ಮುಗಿದಿವೆ. 5ನೇ ತರಗತಿಗೆ ಮಾರ್ಚ್‌ 14ರವರೆಗೆ, 8 ಹಾಗೂ 9ನೇ ತರಗತಿಗೆ ಮಾರ್ಚ್‌16ರವರೆಗೆ ಪರೀಕ್ಷೆಗಳನ್ನು ನಡೆಸಬೇಕಿದೆ.  

ಕೋರ್ಟ್‌ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳ ಧೋರಣೆ ಸರಿಯಲ್ಲ. ಮಂಗಳವಾರ ಪರೀಕ್ಷೆ ಬರೆದು ಮನೆಗೆ ಹೋದ ವಿದ್ಯಾರ್ಥಿಗಳಿಗೆ ಬುಧವಾರ ಪರೀಕ್ಷೆ ನಡೆಯುವುದಿಲ್ಲ ಎಂದು ಹೇಗೆ ಹೇಳಬೇಕು?
ದೀಪಾ ಮಲ್ಲಿಕಾರ್ಜುನ್‌, ಶಿಕ್ಷಕಿ
ಸರ್ಕಾರ, ಖಾಸಗಿ ಶಾಲಾ ಆಡಳಿತ ಮಂಡಳಿ ನಡುವಿನ ತಿಕ್ಕಾಟಕ್ಕೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಸಂತ್ರಸ್ತರಾಗಿದ್ದಾರೆ. ಎಲ್ಲ ಸಿದ್ಧತೆ, ಸಮಯ ವ್ಯರ್ಥವಾಗಿದೆ
ಬಿ.ಸಿದ್ದಬಸಪ್ಪ, ಅಧ್ಯಕ್ಷ, ಪ್ರೌಢಶಾಲಾ ಸಹಶಿಕ್ಷಕರ ಸಂಘ
ಪರೀಕ್ಷೆಯ ದಿಢೀರ್ ಮುಂದೂಡಿಕೆ ಪುಟ್ಟ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅವರು ನಿರಾಸಕ್ತಿ, ಖಿನ್ನತೆಗೂ ಒಳಗಾಗುತ್ತಾರೆ. ನಿರ್ಧಾರ ತೆಗೆದುಕೊಳ್ಳುವ ಮೊದಲೇ ಸರ್ಕಾರ ಯೋಚಿಸಬೇಕಿತ್ತು
ಸಂಧ್ಯಾ ಕಾವೇರಿ, ಮಕ್ಕಳ ಸಮಾಲೋಚಕಿ, ಮಾನಸ ವಿದ್ಯಾಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.