ADVERTISEMENT

ಸಿಎಂ, ಡಿಸಿಎಂ ಉಪಾಹಾರ ಸಭೆಯಲ್ಲಿ ನಾನಿರಲಿಲ್ಲ: ಎ.ಎಸ್. ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2025, 20:03 IST
Last Updated 29 ನವೆಂಬರ್ 2025, 20:03 IST
ಉದ್ಘಾಟನಾ ಸಮಾರಂಭದಲ್ಲಿ ಎ.ಎಸ್ ಪೊನ್ನಣ್ಣ ಮಾತನಾಡಿದರು
ಉದ್ಘಾಟನಾ ಸಮಾರಂಭದಲ್ಲಿ ಎ.ಎಸ್ ಪೊನ್ನಣ್ಣ ಮಾತನಾಡಿದರು   

ಬೆಂಗಳೂರು: ‘ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವಿನ ಉಪಾಹಾರ ಸಭೆಯಲ್ಲಿ ನಾನು ಇರಲಿಲ್ಲ’ ಎಂದು ಶಾಸಕರೂ ಆಗಿರುವ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ಶಿವಕುಮಾರ್ ಅವರು ಸಿದ್ದರಾಮಯ್ಯ ಮನೆಗೆ ಬಂದಾಗ ಎ.ಎಸ್‌. ಪೊನ್ನಣ್ಣ ಕೂಡಾ ‘ಕಾವೇರಿ’ಯಲ್ಲಿ ಇದ್ದರು.

ಈ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊನ್ನಣ್ಣ, ‘ಅವರಿಬ್ಬರೂ ಏನು ಚರ್ಚಿಸಿದರೆಂದು ನನಗೆ ಗೊತ್ತಿಲ್ಲ.ಹೈಕಮಾಂಡ್ ಸೂಚನೆಯಂತೆ ನಡೆದ ಈ ರಹಸ್ಯ ಸಭೆಯ ವಿವರ ನಿಮಗೆಷ್ಟು ಗೊತ್ತಿದೆಯೊ, ನನಗೂ ಅಷ್ಟೇ ಗೊತ್ತು’ ಎಂದೂ ಹೇಳಿದರು.

ADVERTISEMENT

‘ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರೂ ಮಾತನಾಡಲು ಸಭೆ ನಿಗದಿಯಾಗಿತ್ತು. ಸೌಜನ್ಯದ ಭೇಟಿಗಾಗಿ ಮುಖ್ಯಮಂತ್ರಿ ನಿವಾಸಕ್ಕೆ ಹೋಗಿದ್ದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.