ADVERTISEMENT

ಶಾಸಕರ ಪತ್ರವನ್ನು ಸಿಎಂ ಸಿದ್ದರಾಮಯ್ಯ ಹರಿದಿಲ್ಲ: ಸಚಿವಾಲಯ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 15:40 IST
Last Updated 29 ಜುಲೈ 2023, 15:40 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚನ್ನಗಿರಿ ಶಾಸಕ ಬಸವರಾಜ್‌ ಶಿವಗಂಗ ನೀಡಿದ ಪತ್ರವನ್ನು ಹರಿದುಹಾಕಿದ್ದಾರೆ ಎಂಬುದರಲ್ಲಿ ಸತ್ಯಾಂಶವಿಲ್ಲ’ ಎಂದು ಮುಖ್ಯಮಂತ್ರಿಯವರ ಸಚಿವಾಲಯ ತಿಳಿಸಿದೆ.

‘ಬಸವರಾಜ್‌ ಶಿವಗಂಗ ಶಾಸಕಾಂಗ ಪಕ್ಷದ ಸಭೆಗೆ ಪತ್ರವೊಂದನ್ನು ತಂದಿದ್ದರು. ಆದರೆ, ಅದನ್ನು ಅವರು ಮುಖ್ಯಮಂತ್ರಿಯವರಿಗೆ ನೀಡಿರಲಿಲ್ಲ. ಅದನ್ನು ಮುಖ್ಯಮಂತ್ರಿಯವರು ಹರಿದುಹಾಕಲೂ ಇಲ್ಲ’ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

‘ಕೆಲಸ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ನಮ್ಮನ್ನೇ (ಶಾಸಕರನ್ನು) ಸಚಿವರ ವಿಶೇಷಾಧಿಕಾರಿಯಾಗಿ ನೇಮಿಸಿ’ ಎಂಬ ವ್ಯಂಗ್ಯಭರಿತ ಕೋರಿಕೆಯುಳ್ಳ ಪತ್ರವನ್ನು ಬಸವರಾಜ್‌ ಮುಖ್ಯಮಂತ್ರಿಯವರಿಗೆ ನೀಡಿದ್ದರು. ಅದನ್ನು ಸಿದ್ದರಾಮಯ್ಯ ಹರಿದುಹಾಕಿದ್ದರು’ ಎಂದು ‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.