ADVERTISEMENT

‘ರಕ್ಷಾ ಬಂಧನ’ದಲ್ಲಿ ಎಸ್‌ಪಿಬಿ ಹಾಡು

ಕಲರ್ಸ್ ಕನ್ನಡದಲ್ಲಿ ಜುಲೈ 22 ರಿಂದ ಧಾರಾವಾಹಿ ಪ್ರಸಾರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 18:18 IST
Last Updated 19 ಜುಲೈ 2019, 18:18 IST
ಬಾಲಸುಬ್ರಹ್ಮಣ್ಯಂ
ಬಾಲಸುಬ್ರಹ್ಮಣ್ಯಂ   

ಬೆಂಗಳೂರು:ಪ್ರಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಬಹಳ ದಿನಗಳ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಧಾರಾವಾಹಿಯೊಂದರ ಶೀರ್ಷಿಕೆ ಗೀತೆ ಹಾಡಿದ್ದಾರೆ.

ಜುಲೈ 22ರಿಂದ ಸೋಮವಾರ ದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿರುವ ‘ರಕ್ಷಾ ಬಂಧನ’ದ ಶೀರ್ಷಿಕೆ ಗೀತೆ ಎಸ್‌.ಪಿ.ಬಿ ಅವರ ಸಿರಿ ಕಂಠದಿಂದ ಹೊರಹೊಮ್ಮಿದೆ.

‘ಕಲರ್ಸ್ ಕನ್ನಡವಾಗಿ ಬದಲಾಗುವ ಮೊದಲು ಈ ವಾಹಿನಿ ಈಟಿವಿ ಕನ್ನಡ ವಾಗಿತ್ತು. ಆಗ ಎಸ್.ಪಿ.ಬಿ. ಅವರು ನಡೆಸಿ ಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಕ್ಕಾಗಿ ಇಡೀ ಕರ್ನಾಟಕ ಕಾದು ಕುಳಿತಿರುತ್ತಿತ್ತು. ಬಹಳ ವರ್ಷಗಳ ನಂತರ ಇದೀಗ
ಎಸ್.ಪಿ.ಬಿ. ಅವರು ಕಿರುತೆರೆಗೆ ಮರಳಿ ದ್ದಾರೆ’ ಎಂದುವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್‌ನ ಬಿಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಹೇಳುತ್ತಾರೆ.

ADVERTISEMENT

‘ನಮ್ಮ ಚಾನೆಲ್‍ಗೂ ಎಸ್‌.ಪಿ.ಬಿ. ಅವರಿಗೂ ಬಹಳ ಕಾಲದಿಂದಲೂ ನಂಟಿದೆ. ಅವರು ‘ರಕ್ಷಾಬಂಧನ’ದ ಶೀರ್ಷಿಕೆ ಗೀತೆ ಹಾಡಿರುವುದು ನಮ್ಮೆಲ್ಲರ ಪ್ರಯತ್ನಕ್ಕೆ ಬೆನ್ನು ತಟ್ಟಿದಂತಿದೆ. ಅಂಥ ದಿಗ್ಗಜರ ಜೊತೆಗೆ ಕೆಲಸ ಮಾಡಲು ನಮಗೆ ಅತೀವ ಹೆಮ್ಮೆಯಾಗುತ್ತಿದೆ’ ಎಂದು ಅವರು ಸಂತಸ ವ್ಯಕ್ತಪಡಿಸುತ್ತಾರೆ.

ಈಗ ಕನ್ನಡ ಕಿರುತೆರೆಯಲ್ಲಿ ಪ್ರಸಾರ ವಾಗುತ್ತಿರುವಕತೆಗಳಿಗಿಂತ ತೀರಾ ಭಿನ್ನವಾಗಿರುವ ಮತ್ತು ಕೌಟುಂಬಿಕ ಮೌಲ್ಯಗಳನ್ನು ಸಾರುವ ಧಾರಾವಾಹಿ ‘ರಕ್ಷಾಬಂಧನ’ ಎಂದು ಪರಮೇಶ್ವರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.