ADVERTISEMENT

ಸಾಂಭಾಜಿ ಪಾಟೀಲ್‌ ಮನೆಯಲ್ಲಿ ಆಸ್ತಿ ಕಲಹ: ಅತ್ತೆ ವಿರುದ್ಧ ಸೊಸೆ ಕೊಲೆ ಆರೋಪ

ಆಸ್ತಿಗಾಗಿ ಹಲ್ಲೆ; ದೂರು

​ಪ್ರಜಾವಾಣಿ ವಾರ್ತೆ
Published 21 ಮೇ 2019, 2:21 IST
Last Updated 21 ಮೇ 2019, 2:21 IST
   

ಬೆಳಗಾವಿ: ಮಾಜಿ ಶಾಸಕ ಸಂಭಾಜಿ ಪಾಟೀಲ ನಿಧನರಾಗಿ ಮೂರು ದಿನ ಕಳೆಯುವಷ್ಟರಲ್ಲಿ ಆಸ್ತಿ ಹಂಚಿಕೆಗಾಗಿ ಅತ್ತೆ ಹಾಗೂ ಸೊಸೆಯ ನಡುವೆ ತಿಕ್ಕಾಟ ಆರಂಭವಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಆಸ್ತಿ ನೀಡುವುದನ್ನು ತಪ್ಪಿಸುವುದಕ್ಕಾಗಿ ತನ್ನ ಮೇಲೆ ಬಾಡಿಗೆ ಜನರಿಂದ ಹಲ್ಲೆ ಮಾಡಿಸಿದ್ದಾರೆ ಎಂದು ಸಂಭಾಜಿ ಅವರ 2ನೇ ಪತ್ನಿ ಉಜ್ವಲಾ ವಿರುದ್ಧ ಸಂಭಾಜಿ ಅವರ ಮೊದಲ ಪತ್ನಿ ಮಗನ 2ನೇ ಪತ್ನಿ ಸಾಧನಾ ಪೊಲೀಸರಿಗೆ ಸೋಮವಾರ ರಾತ್ರಿ ದೂರು ನೀಡಿದ್ದಾರೆ.

ಇಲ್ಲಿಗೆ ಸಮೀಪದ ಬೆನಕನಹಳ್ಳಿಯ ತೋಟದ ಮನೆಯಲ್ಲಿ ಸಾಧನಾ ತಮ್ಮ ಸಂಬಂಧಿಕರ ಜೊತೆ ವಾಸವಾಗಿದ್ದರು. ‘ಮಧ್ಯಾಹ್ನದ ವೇಳೆ ಐದು ಜನ ಮಹಿಳೆಯರು ಹಾಗೂ ಮೂರು ಜನ ಪುರುಷರು ಏಕಾಏಕಿ ಮನೆಯೊಳಗೆ ನುಗ್ಗಿ ಬಂದು, ನನ್ನ ಮೇಲೆ ಹಲ್ಲೆ ಮಾಡಿದರು. ಚಾಕುವಿನಿಂದ ಇರಿಯಲೂ ಪ್ರಯತ್ನಿಸಿದರು. ಆಗ, ಜಗಳ ಬಿಡಿಸಲು ಮಧ್ಯೆಪ್ರವೇಶಿಸಿದ ರೂಪಾಲಿ ಎನ್ನುವವರಿಗೆ ಗಾಯವಾಯಿತು’ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

‘ಕುಟುಂಬದ ಆಸ್ತಿ ನನಗೆ ಸಿಗಬಾರದು ಎನ್ನುವ ಕಾರಣದಿಂದ ಅತ್ತೆ ಉಜ್ವಲಾ ಬಾಡಿಗೆ ಜನರನ್ನು ಬಿಟ್ಟು ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ. ನನ್ನ ಪತಿ ಸಾಗರ ಸಾವಿನಲ್ಲೂ ಇವರ ಕೈವಾಡವಿದೆ’ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಸಾಗರ ಬೆಂಗಳೂರಿನಿಂದ ಬರುತ್ತಿದ್ದಾಗ ರೈಲಿನಿಂದ ಬಿದ್ದು ಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.