ADVERTISEMENT

ಐದು ರಾಜ್ಯಗಳಲ್ಲಿ ಸೋಲು; ಪರಿಸ್ಥಿತಿ ಅವಲೋಕನಕ್ಕೆ ಐವರನ್ನು ನೇಮಿಸಿದ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 18:12 IST
Last Updated 16 ಮಾರ್ಚ್ 2022, 18:12 IST
   

ನವದೆಹಲಿ: ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಸೋಲಿನ ಬಳಿಕ, ಪಕ್ಷದ ಪರಿಸ್ಥಿತಿ ಕುರಿತು ಅವಲೋಕನ ನಡೆಸಲು ಮತ್ತು ಸಂಘಟನೆಗೆ ಸಲಹೆಗಳನ್ನು ನೀಡಲು ಐವರು ನಾಯಕರನ್ನು ಕಾಂಗ್ರೆಸ್‌ ನೇಮಿಸಿದೆ.

ನೇಮಕವು ತಕ್ಷಣದಿಂದಲೇ ಜಾರಿಯಾಗಲಿದ್ದು, ಪಕ್ಷದ ನಿರ್ಧಾರದ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ಪ್ರಕಟಣೆ ಹೊರಡಿಸಿದ್ದಾರೆ. ಅದರಂತೆ,ಗೋವಾಗೆ ಶ್ರೀಮತಿ ರಂಜನಿ ಪಾಟೀಲ್‌, ಮಣಿಪುರಕ್ಕೆ ಜೈರಾಮ್‌ ರಮೇಶ್‌, ಪಂಜಾಬ್‌ಗೆ ಅಜಯ್‌ ಮಾಕೇನ್‌, ಉತ್ತರ ಪ್ರದೇಶಕ್ಕೆ ಜೀತೆಂದ್ರ ಸಿಂಗ್ ಮತ್ತು ಉತ್ತರಾಖಂಡಕ್ಕೆ ಅವಿನಾಶ್‌ ಪಾಂಡೆ ಅವರನ್ನುನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT