ADVERTISEMENT

ಆರ್‌ಎಸ್‌ಎಸ್ ಹೊಗಳುವುದು ಸಂವಿಧಾನಕ್ಕೆ ಅಪಚಾರ: ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 15:49 IST
Last Updated 2 ಅಕ್ಟೋಬರ್ 2025, 15:49 IST
ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್   

ಬೆಂಗಳೂರು: ಸಂವಿಧಾನದತ್ತವಾಗಿ ಪ್ರಾಪ್ತವಾದ ಪ್ರಧಾನ ಮಂತ್ರಿ ಸ್ಥಾನದಲ್ಲಿ ಕುಳಿತ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದ, ಬ್ರಿಟಿಷರ ಏಜೆಂಟ್‌ ಆಗಿದ್ದ ಆರ್‌ಎಸ್‌ಎಸ್‌ ಹೊಗಳಿರುವುದು ಸ್ವಾತಂತ್ರ್ಯ ಭಾರತಕ್ಕೇ ಕರಾಳ ದಿನ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ, ಅಹಿಂಸಾ ತತ್ವದ ಮೂಲಕ ಬ್ರಿಟಷರನ್ನೇ ಜಯಿಸಿದ ಶಾಂತಿಧೂತ ಮಹಾತ್ಮ ಗಾಂಧಿಯನ್ನೇ ಹತ್ಯೆ ಮಾಡಿದ ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್‌ ಗೋಡ್ಸೆ ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತ. ಆಗ ಸರ್ದಾರ್‌ ವಲ್ಲಭಭಾಯಿ ಪಟೇಲರೇ ಆರ್‌ಎಸ್‌ಎಸ್‌ ನಿಷೇಧಿಸಿದ್ದರು. ಇದುವರೆಗೂ ಮೂರು ಬಾರಿ ನಿಷೇಧಕ್ಕೆ ಒಳಗಾದ ಅಂತಹ ಸಂಘಟನೆಯನ್ನು ದೇಶದ ಪ್ರಧಾನಿ ಹೊಗಳುವುದು ಸಂವಿಧಾನಕ್ಕೆ ಮಾಡಿದ ಅಪಚಾರ’ ಎಂದರು.

‘ಸುಳ್ಳುಗಳನ್ನೇ ಹೇಳುತ್ತಾ ಜನರಿಗೆ ಸತ್ಯವೆಂದು ನಂಬಿಸುವ ಆರ್‌ಎಸ್‌ಎಸ್‌ ಸ್ಥಾಪನೆಯಾಗಿ 100 ವರ್ಷಗಳಾಗಿವೆ. ಬಿಜೆಪಿ ಹಾಗೂ ಸಂಘಪರಿವಾರಗಳೂ ಅದೇ ಹಾದಿಯಲ್ಲಿ ಸಾಗಿವೆ. ಗಾಂಧಿ ತತ್ವಗಳಿಗೆ ವಿರುದ್ಧವಾಗಿ ಅವು ಪಾಠ ಮಾಡುತ್ತವೆ’ ಎಂದು ಟೀಕಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.