ADVERTISEMENT

ರಾಮ ಮಂದಿರವಾದರೂ ಕಟ್ಟಲಿ, ಅಶ್ವತ್ಥನಾರಾಯಣ ಮಂದಿರವಾದರೂ ಕಟ್ಟಲಿ: ಡಿಕೆ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 2:54 IST
Last Updated 29 ಡಿಸೆಂಬರ್ 2022, 2:54 IST
   

ಬೆಳಗಾವಿ: ‘ರಾಮನಗರದಲ್ಲಿರುವ ರಾಮದೇವರ ಬೆಟ್ಟವನ್ನು ದಕ್ಷಿಣ ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ’ ಎಂಬ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

‘ರಾಮಮಂದಿರ ಜೀರ್ಣೋದ್ಧಾರಕ್ಕೆಅಭಿವೃದ್ಧಿಗೆ ಯೋಜನೆ ರೂಪಿಸಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ. ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಆಹ್ವಾನಿಸುತ್ತೇವೆ. ಹಿಂದೂ ಧಾರ್ಮಿಕ ಕೇಂದ್ರವಾನ್ನಾಗಿ ಮಾಡುತ್ತೇವೆ’ ಎಂದು ಅಶ್ವತ್ಥನಾರಾಯಣ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್‌, ‘ಅಲ್ಲಿ ರಾಮಮಂದಿರವಾದರೂ ಕಟ್ಟಲಿ, ಸೀತಾ ಮಂದಿರವಾದರೂ ಕಟ್ಟಲಿ, ಅಶ್ವತ್ಥನಾರಾಯಣ ಮಂದಿರವಾದರೂ ಕಟ್ಟಿಕೊಳ್ಳಲಿ, ನಮ್ಮ ತಕರಾರು ಇಲ್ಲ’ ಎಂದಿದ್ದಾರೆ.

‘ಮೂರು ವರ್ಷದ ಹಿಂದೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದರು. ಏನೋ ಕ್ಲೀನ್‌ ಮಾಡ್ತೇನೆ ಅಂತಿದ್ರು, ಈಗ ಎಲ್ಲವನ್ನೂ ಕ್ಲೀನ್‌ ಮಾಡಿದ್ದಾರೆ. ಇಡೀ ರಾಮನಗರ ಕ್ಲೀನ್‌ ಮಾಡಿರೋದು ನೋಡಿದ್ದೀನಿ’ ಎಂದು ವ್ಯಂಗ್ಯವಾಡಿದರು.

ಅಮಿಶ್‌ ಶಾ ಭೇಟಿಯ ಬಗ್ಗೆ ಪ್ರಶ್ನಿಸಿದಾಗ, ‘ಮೊದಲು ಅಮಿತ್ ಶಾ ಅವರು ಬಂದು ಹೋಗಲಿ’ ಎಂದಷ್ಟೇ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.